ಯುವತಿ ಅನುಮಾನಾಸ್ಪದ ಸಾವು: ʻನನ್ನ ಮಗಳ ಕೊಲೆಯಾಗಿದೆʼ ಎಂದ ತಾಯಿ

Most read

ಬೆಂಗಳೂರು: ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಭುಧ್ಯಾ (21) ಎಂಬ ಯುವತಿಯ ಮೃತದೇಹ ನಿನ್ನೆ ಸಂಜೆ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗಳ ಕೊಲೆಯಾಗಿದೆ ಎಂದು ಆಕೆಯ ತಾಯಿ ಆರೋಪಿಸಿದ್ದಾರೆ.

ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಮನೆಯ ಬಾತ್‌ ರೂಂನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ನಿನ್ನೆ ಸಂಜೆ ಪ್ರಭುಧ್ಯಾ ಪತ್ತೆಯಾಗಿತ್ತು.

ನನ್ನ ಮಗಳು ಪ್ರಭುದ್ಯಾಳನ್ನು ಹತ್ಯೆ ಮಾಡಲಾಗಿದೆ ಎಂದು ಮೃತ ಪ್ರಭುದ್ಯಾ ತಾಯಿ ಸೌಮ್ಯ ಹೇಳಿದ್ದಾರೆ. ಮಗಳು ಧೈರ್ಯವಂತೆ, ಯಾವುದೇ ಸಮಸ್ಯೆ ಇರಲಿಲ್ಲ. ಪಾನಿಪುರಿ ತಿನ್ನುವುದಕ್ಕೆ ಹೋಗುತ್ತೇನೆ ಎಂದು ಫೋನ್ ಮಾಡಿದ್ದಳು. ಕಾಲೇಜಿಗೆ ಹೋದಾಗಲೂ ಫೋನ್ ಮಾಡುತ್ತಿದ್ದಳು. ನಾನು ಕೆಲಸಕ್ಕೆ ಹೋಗಿದ್ದೆ, ಮಗ ಜಿಮ್ ಗೆ ಹೋಗಿದ್ದ. ಮನೆಯಲ್ಲಿ ಮಗಳು ಪ್ರಭುದ್ಯಾ ಒಬ್ಬಳೇ ಇದ್ದಳು ಎಂದು ತಾಯಿ ಸೌಮ್ಯ ವಿವರಿಸಿದ್ದಾರೆ.

ಮನೆಯ ಹಿಂದಿನ ಬಾಗಿಲು ಓಪನ್ ಆಗಿದೆ. ಮನೆಯಲ್ಲಿ ಇದ್ದ ಮಗಳ ಫೋನ್ ನಾಪತ್ತೆಯಾಗಿದೆ. ಯಾರೋ ನನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

More articles

Latest article