ಕೋಲಾರ : ನಗರದಲ್ಲಿ ಪ್ರೇಯಸಿ ಮನೆಯಿಂದ ಮರಳಿ ಬರುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲೇ ಮಾರಕಾಸ್ರ್ತಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ನೂರ್ ನಗರದಲ್ಲಿ ತಡರಾತ್ರಿ ನಡೆದಿದೆ.
ಮಿಲ್ಲತ್ ನಗರದ ನಿವಾಸಿ ಉಸ್ಮಾನ್(28) ಎಂಬಾತನು ಕೊಲೆಯಾದ ಯುವಕನಾಗಿದ್ದು ಕಳೆದ 5 ವರುಷಗಳ ಹಿಂದೆ ಜಬಿನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಹೆಂಡತಿ ಜಬಿನಾ ಕಿಡ್ನಿ ವೈಪಲ್ಯದಿಂದ ಬಳಲುತ್ತಲಿದ್ದು ಆಕೆಯನ್ನು ನೋಡಲು ಬರುತ್ತಿದ್ದ ಸಂಬಂಧಿ ಯುವತಿಯನ್ನು ಉಸ್ಮಾನ್ ಪ್ರೀತಿಸಲು ಆರಂಭಿಸಿದ್ದ. ಈ ಬಗ್ಗೆ ಪ್ರೇಮಸಿ ಮನೆಯರು ಸಾಕಷ್ಟು ಬಾರಿ ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದರೆನ್ನಲಾಗಿದೆ.
ಕಳೆದ ರಾತ್ರಿ ಉಸ್ಮಾನ್ ನೂರ್ ನಗರದ ಪ್ರೇಯಸಿ ಮನೆಗೆ ಹೋಗಿ ವಾಪಸ್ ಮರಳುತ್ತಿದ್ದಾಗ ಉಸ್ಮಾನ್ ನನ್ನು ಅಡ್ಡಗಟ್ಟಿದ್ದು ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಅಟ್ಟಾಡಿಸಿ ಮಾರಕಾಸ್ರ್ತಗಳಿಂದ ಭೀಕರವಾಗಿ ಹಲ್ಲೆ ನಡೆಸಿಲಾಗಿದ್ದು ಆತ ತಪ್ಪಿಸಿಕೊಂಡು ಹೋಗಿ ಕುಸಿದು ಬಿದ್ದಿನೆನ್ನಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಉಸ್ಮಾನ್ ತಂದೆ ಹಾಗೂ ಸಹೋದರಿ ದೂರು ಸಲ್ಲಿಸಿದ್ದು ಆಕೆಯ ಮನೆಯವರ ಕಡೆಯಿಂದ ಹಲ್ಲೆ ನಡೆದಿದ್ದು ಪೋಲೀಸರಿಗೆ ದೂರು ನೀಡಿ ಕ್ರಮ ಜರುಗಿಸಬಹುದಾಗಿತ್ತು. ಅದು ಬಿಟ್ಟು ಗುಂಪು ಗೂಡಿ ಈ ರೀತಿ ಭೀಕರವಾಗಿ ಕೊಚ್ಚಿಕೊಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.