BBK ವಾರದ ಪಂಚಾಯತಿಯಲ್ಲಿ ಯೋಗರಾಜ್‌ ಭಟ್‌ : ನಾಳೆ ಯಾರು?

ಈ ವಾರದ ಬಿಗ್‌ ಬಾಸ್‌ ಶೋನ ʼವಾರದ ಪಂಚಾಯತಿಯನ್ನುʼ ನಟ ಸುದೀಪ್‌ ಬದಲಿಗೆ ನಿರ್ದೇಶಕ ಯೋಗರಾಜ್‌ ಭಟ್‌ ನಡೆಸಿಕೊಡಲಿದ್ದಾರೆ. ಈಗಾಗಲೇ ಕಲರ್ಸ್‌ ಚಾನೆಲ್‌ನಲ್ಲಿ ಯೋಗರಾಜ್‌ ಭಟ್ಟರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವ ಪ್ರೋಮೊ ಬಿಡುಗಡೆ ಮಾಡಲಾಗಿದೆ.

ಕಳೆದ ವಾರ ಅ.20 ರಂದು ಅನಾರೋಗ್ಯದ ಕಾರಣದಿಂದ ನಟ ಸುದೀಪ್‌ ಅವರ ತಾಯಿ ನಿಧನರಾಗಿದ್ದರು. ಮಾತೃ ವಿಯೋಗದ ನೋವಿನಲ್ಲಿರುವ ಸುದೀಪ್‌ ಅವರು ಈ ವಾರ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.

ವಾರದ ಪಂಚಾಯತಿಯ ಮೊದಲ ದಿನವಾದ ಶನಿವಾರ ಯೋಗರಾಜ್‌ ಭಟ್ಟರು ನಡೆಸಿಕೊಡುವುದು ಖಚಿತವಾಗಿದೆ. ಆದರೆ ಭಾನುವಾರದ ಪಂಚಾಯತಿಯನ್ನು ನಟ ಸೃಜನ್‌ ಲೋಕೇಶ್‌ ನಡೆಸಿಕೊಡಬಹುದಾದ ಸಾಧ್ಯತೆಗಳಿವೆ ಎನ್ನಲಾಗಿದೆ.

More articles

Latest article

Most read