ಕನ್ನಡ ರಾಜ್ಯೋತ್ಸವ ದಿನದಂದು ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳೆಯರ ಸಹಿ ಸಂಗ್ರಹ ಅಭಿಯಾನ

Most read

ಬೆಂಗಳೂರು : ಧರ್ಮಸ್ಥಳದಲ್ಲಿ ಹತ್ತಾರು ವರ್ಷಗಳಿಂದ ನಡೆದಿರುವ ಅನೇಕ ಮಹಿಳೆಯರ ನಾಪತ್ತೆ, ಅತ್ಯಾಚಾರ, ಅಸಹಜ ಸಾವು ಹಾಗೂ ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳನ್ನು ಇನ್ನೂ ಪತ್ತೆಮಾಡಿಲ್ಲ. ಅದೇ ಕಾರಣವೊಡ್ಡಿ ತನಿಖೆಯನ್ನು ನಿಲ್ಲಿಸುವ ಮಾತುಗಳು ಕೇಳಿಬರುತ್ತಿವೆ. ಈ ನಿರ್ಧಾರವು ಸರಿಯಲ್ಲ. ಹೀಗಾಗಿ, ಧರ್ಮಸ್ಥಳ ಪ್ರಕರಣದಲ್ಲಿ ಅಪರಾಧಿಗಳು ಪತ್ತೆಯಾಗುವವರೆಗೂ ಎಸ್‌ಐಟಿ ತನಿಖೆ ಮುಂದುವರೆಯಬೇಕು. ಧರ್ಮಸ್ಥಳದ ಎಲ್ಲ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ಒಳಗೊಳಿಸಬೇಕು ಎಂದು ಸರಕಾರವನ್ನು ಆಗ್ರಹಿಸಿ ‘ಕನ್ನಡ ರಾಜ್ಯೋತ್ಸವ’ ದಿನವಾದ ನವೆಂಬರ್ 1ರಂದು ರಾಜ್ಯಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಕೊಂದವರು ಯಾರು ಅಭಿಯಾನ ತಂಡವು  ಹಮ್ಮಿಕೊಂಡಿದೆ .

ಬೆಂಗಳೂರಿನಲ್ಲಿ ಇಂದು (ನ.1) ಸಂಜೆ 4 ಗಂಟೆಗೆ ‘ಫ್ರೀಡಂ ಪಾರ್ಕ್‌’ನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.

More articles

Latest article