Saturday, December 7, 2024

ಮಹಿಳಾ ಆಯೋಗದಂತೆ ಪುರುಷ ಆಯೋಗ ರಚನೆ ಮಾಡಿ: ಸರ್ಕಾರಕ್ಕೆ ಶಿವಮೊಗ್ಗ NGO ಒತ್ತಾಯ

Most read

ಸ್ತ್ರಿಯರ ಮೇಲಿನ ದೌರ್ಜನ್ಯ, ಸಮಸ್ಯೆಗಳಿಗೆ ಧ್ವನಿಯಾಗಿರುವ ಮಹಿಳಾ ಆಯೋಗದಂತೆ ಪುರುಷರ ದನಿ ಕೂಡ ಆಲಿಸಲು ಪುರುಷರಿಗೂ ಒಂದು ಆಯೋಗವನ್ನು ರಚನೆ ಮಾಡಬೇಕು ಎಂದು ಕಾರ್ವೆಟೆಕಾ ಹ್ಯೂಮನ್ ರೈಟ್ಸ್ ವೆಲ್ಫೇರ್ ಹಾಗೂ ಕ್ರೈಂ ಕಂಟ್ರೋಲ್ ಫೌಂಡೇಶನ್‌ ಶಿವಮೊಗ್ಗ ಶಾಖೆ ಒತ್ತಾಯಿಸಿದೆ.

ಶಿವಮೊಗ್ಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ NGO ಶಿವಮೊಗ್ಗ ಘಟಕದ ಅಧ್ಯಕ್ಷ ಸಂತೋಷ್ ಹೊನ್ನೆಗುಂಡಿ, ಮಹಿಳೆಯರಿಗೆ ಏನೇ ತೂಂದರೆ ಉಂಟಾದರೆ ಅವರ ರಕ್ಷಣೆಗೆ ಕಾನೂನು ಇದೆ. ಅವರಿಗೆ ಮಹಿಳಾ ಆಯೋಗ ಇದೆ. ಇದರಿಂದ ಅವರಿಗೆ ಸಕಾಲದಲ್ಲಿ ಸ್ಪಂದನೆ ಸಿಗುತ್ತಿದೆ. ಆದರೆ, ಎಷ್ಟೋ ಸಂದರ್ಭಗಳಲ್ಲಿ ಪುರುಷರು ಸಹ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸುಳ್ಳು ಕೇಸುಗಳಲ್ಲಿ ಅವರ ಬಂಧನವಾಗುತ್ತಿದೆ. ಇದರಿಂದ ಅವರ ಜೀವನ, ಕೀರ್ತಿ, ಯಶಸ್ಸು ಎಲ್ಲಾ ಮಣ್ಣು ಪಾಲಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಈ ಕುರಿತು ಯಾಕೆ ಹೋರಾಟ ಮಾಡಬಾರದು ಎಂದು ನಮ್ಮಲ್ಲಿ ಹಲವರು ಬಂದು ಪ್ರಶ್ನಿಸಿದ್ದಾರೆ, ಚರ್ಚೆಗಳು ನಡೆದಿವೆ. ಈ ಹಿನ್ನೆಲೆ ಈ ಬೇಡಿಕೆ ಮುಂದಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಹಲವು ಬಾರಿ ಅಮಾಯಕ ಪುರುಷರ ಮೇಲೆ ವರದಕ್ಷಿಣೆ, ಅತ್ಯಾಚಾರ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿ ಸಾಕಷ್ಟು ಕೇಸುಗಳು ಸುಳ್ಳು‌ ಕೇಸುಗಳಾಗಿವೆ. ಕೊನೆಯಲ್ಲಿ ಇದು ರಾಜಿಯಲ್ಲಿ ಅಂತ್ಯವಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಮಾಯಕ ಪುರುಷನೊಬ್ಬ ಸಮಾಜದಲ್ಲಿ ಏನೂ ತಪ್ಪು ಮಾಡದೆ ನಿಂದನೆಗೆ ಒಳಗಾಗುತ್ತಾರೆ. ಇಂತಹವನ್ನು ಕಡಿವಾಣ ಹಾಕಲು ಆಯೋಗ ರಚನೆಯಾಗಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧ ಪಟ್ಟಂತವರಿಗೆ ನಮ್ಮ ಸಂಸ್ಥೆ ಮನವಿ ಮಾಡಲಿದೆ ಎಂದು ಹೇಳಿದ್ದಾರೆ.

More articles

Latest article