ಕೋಲಾರ : ನಗರದ ಕೋಲಾರಮ್ಮ ಕೆರೆಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಇವರನ್ನು ಆಶಾ (25) ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದ ಟಮಕ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಮಹಿಳೆ ಆಶಾ ಕಳೆದ 6 ರಿಂದ ಕಾಣೆಯಾಗಿದ್ದರು. ಈಕೆಯ ಪತಿ ನಾಗೇಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂದು ಬೆಳಗ್ಗೆ ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಕಂಡು ದಾರಿಹೋಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಅಗ್ನಿ ಶಾಮಕ ದಳ ಹಾಗೂ ಜೀವ ರಕ್ಷಕ ಬೋಟ್ ನಲ್ಲಿ ತೆರಳಿ ಶವವನ್ನು ಹೊರತೆಗೆದಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ಆಕೆ ಕೆರೆಗೆ ಹಾರಿ ಸಾವನ್ನಪ್ಪಿರುವುದರಿಂದ ಶವವು ಗುರುತು ಸಿಗಲಾರದಷ್ಟು ಕೊಳೆತಿದೆ.