ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಪಿಹೆಚ್​​ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊಫೆಸರ್ ಪಿಹೆಚ್​ಡಿ (Phd) ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಮ್ಯಾನೇಜ್ಮೆಂಟ್ ವಿಭಾಗದ ಪ್ರೋ. ಮಲ್ಲಿಕಾರ್ಜುನ ಎನ್​ಎಲ್ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತುಳಸೀಮಾಲಾ ಅವರಿಗೆ ಫೆಬ್ರವರಿ 27 ರಂದು ವಿದ್ಯಾರ್ಥಿನಿ ದೂರು ನೀಡಿದ್ದಾರೆ.

ಇನ್ನು ವಿದ್ಯಾರ್ಥಿನಿ ನೀಡಿರುವ ದೂರನ್ನು ಕುಲಪತಿ ಪ್ರೋ. ತುಳಸೀಮಾಲಾ ಅವರು ಆಂತರಿಕ ದೂರು ಸಮಿತಿಗೆ ರವಾನಿಸಲಿದ್ದಾರೆ. ಬಳಿಕ ಆಂತರಿಕ ದೂರು ಸಮಿತಿ ವಿಚಾರಣೆ ನಡೆಸಲಿದೆ.

ಪ್ರೋ. ಮಲ್ಲಿಕಾರ್ಜುನ ಎನ್​ಎಲ್ 2017 ರಿಂದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿನಿಗೆ‌ ನ್ಯಾಯ ಒದಗಿಸಬೇಕೆಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.

More articles

Latest article

Most read