130 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕುವ ವಿಶ್ವಾಸವಿದೆ: ದಲೈ ಲಾಮಾ
ಧರ್ಮಶಾಲಾ: ಅವಲೋಕಿತೇಶ್ವರನ ಆಶೀರ್ವಾದ ನನ್ನ ಮೇಲಿದ್ದು, ನಾನು 130 ವರ್ಷಗಳಿಗಿಂತಲೂ ಹೆಚ್ಚು ಕಾಲ ಬದುಕುವ ವಿಶ್ವಾಸವಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
ತ್ಸುಗ್ಲಾಗ್ ಖಾಂಗ್ ನಲ್ಲಿ ನಡೆದ ದೀರ್ಘಾಯುಷ್ಯ ಪ್ರಾರ್ಥನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅವಲೋಕಿತೇಶ್ವರನ ಆರ್ಶಿರ್ವಾದದಿಂದ 30–40 ವರ್ಷಗಳ ಕಾಲ ಜನರ ಸೇವೆ ಮಾಡಲು ಬಯಸುತ್ತೇನೆ ಎಂದರು. ಹಲವು ಭವಿಷ್ಯವಾಣಿಗಳನ್ನು ನೋಡುವಾಗ ನನಗೆ ಅವಲೋಕಿತೇಶ್ವರನ ಆಶೀರ್ವಾದವಿದೆ ಎಂದು ಭಾಸವಾಗುತ್ತದೆ. ಇದುವರೆಗೆ ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ. ಇನ್ನೂ 30-40 ವರ್ಷಗಳ ಕಾಲ ಬದುಕಬೇಕೆಂದು ಬಯಸುತ್ತೇನೆ. ಇಲ್ಲಿಯವರೆಗೆ ನಿಮ್ಮ ಪ್ರಾರ್ಥನೆಗಳು ಫಲ ನೀಡಿವೆ ಎಂದು ಹೇಳಿದರು.
ನಾಳೆ ದಲೈ ಲಾಮಾ ಅವರು 90ನೇ ವಸಂತಕ್ಕೆ ಕಾಲಿಡುತ್ತಿದ್ದು, ಇದರ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ರಾಜೀವ್ ರಂಜನ್ ಸಿಂಗ್ ಅವರು ಭಾಗವಹಿಸಲಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತು ಹಾಲಿವುಡ್ ನಟ ರಿಚರ್ಡ್ ಗೆರ್ರೆ ಅವರೂ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.