ನನ್ನ ವಿರುದ್ಧ ಒಂದು ದಾಖಲೆಯನ್ನು ಕೊಟ್ಟರೆ ಜಾರ್ಖಂಡ್‌ ಅನ್ನು ಶಾಶ್ವತವಾಗಿ ತೋರೆಯುತ್ತೇನೆ : ಹೇಮಂತ್‌ ಸೋರೆನ್

ʼನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ಧ್ವನಿಯನ್ನು ಹತ್ತಿಕ್ಕಲು ಬಯಸಿದರೆ ಅದು ನಡೆಯುವುದಿಲ್ಲʼ ಎಂದು ಬಿಜೆಪಿ ವಿರುದ್ಧ ಹೇಮಂತ್‌ ಸೋರೆನ್ ವಾಗ್ದಾಳಿ ನಡೆಸಿದರು.

ಜಾರ್ಖಂಡ್‌ ನೂತನ ಮುಖ್ಯಮಂತ್ರಿ ಚಂಪೈ ಸೊರೆನ್ ಇಂದು (ಫೆಬ್ರವರಿ 5) ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯ ಮಂಡಿಸಿದರು. ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೂಡ ವಿಶ್ವಾಸನಿರ್ಣಕ್ಕೆ ಮತಯಾಚಿಸಲು ವಿಧಾನಸಭೆಗೆ ಹಾಜರಾಗಿದ್ದರು.

ವಿಶ್ವಾಸ ಮತ ಭಾಷಣದ ವೇಳೆ, ಬಿಜೆಪಿಯು ಬುಡಕಟ್ಟು ಜನರನ್ನು ಅಸ್ಪೃಶ್ಯರಂತೆ ಪರಿಗಣಿಸುತ್ತದೆ ಎಂದು ಆರೋಪಿಸಿದರು. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಐ-ಟಿ ಇಲಾಖೆಗಳು ಕೋಟಿಗಟ್ಟಲೆ ಹಣವನ್ನು ಬಿಜೆಪಿ ನಾಯಕರು ನುಂಗಿದರೂ ಮುಟ್ಟುವುದಿಲ್ಲ ಮತ್ತು ರಾಜ್ಯದಲ್ಲಿ ಐದು ವರ್ಷ ಅಧಿಕಾರದಲ್ಲಿ ಒಬ್ಬ ಆದಿವಾಸಿ ನಾಯಕ ಇರುವುದು ಬಿಜೆಪಿಗೆ ಇಷ್ಟವಿಲ್ಲ ಎಂದರು.

“ಜಾರ್ಖಂಡ್‌ನ ಜನರು ನಿಮಗೆ (ಬಿಜೆಪಿ) ಎಂದಿಗೂ ಕ್ಷಮಿಸುವುದಿಲ್ಲ. ನಾನು 8.5 ಎಕರೆ ಭೂಮಿಯನ್ನು ನಕಲಿ ಮಾಡಿದ್ದೇನೆ ಎಂದು ಸಾಬೀತುಪಡಿಸುವ ಒಂದೇ ಒಂದು ದಾಖಲೆಯನ್ನು ತೋರಿಸಿದರೆ, ನಾನು ಜಾರ್ಖಂಡ್ ಅನ್ನು ಶಾಶ್ವತವಾಗಿ ಬಿಟ್ಟುಬಿಡುತ್ತೇನೆʼ ಎಂದು ಹೇಳಿದರು.

ಸದನದಲ್ಲಿ ಜೆಎಂಎಂ ಮತ್ತು ಕಾಂಗ್ರೆಸ್ ಶಾಸಕರು ಹೇಮಂತ್ ಸೋರೆನ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.

More articles

Latest article

Most read