ಬೆಂಗಳೂರು:
ಬಳ್ಳಾರಿ ಜಿಲ್ಲೆಯ ಸಂಡೂರು (ಎಸ್ ಟಿ ಮೀಸಲು) ಕ್ಷೇತ್ರದ ಉಪ ಚುನಾವಣೆಯನ್ನು ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಮೀಸಲು ಕ್ಷೇತ್ರವಾಗಿರುವ ಇಲ್ಲಿ ಗೆಲ್ಲದಿದ್ದರೆ ಅಹಿಂದ ಪಟ್ಟಕ್ಕೆ ಧಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಭಾವಿsiದ್ದು ವಿಶೇಷ ಗಮನ ಹರಿಸಿದ್ದಾರೆ.
ಕಾಂಗ್ರೆಸ್ ನಿಂದ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿ ಬಂಗಾರು ಹನುಮಂತು ಅವರಿಗೆ ಟಿಕೆಟ್ ಘೋಷಿಸಿದೆ. ಇಲ್ಲಿ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಗೆದ್ದದ್ದು ಅಪರೂಪ. ಮೊಲದ ಬಾರಿಗೆ ಈ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಕಸಿದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಹಾಗಾಗಿ ಬಿ.ವೈ.ವಿಜಯೇಂದ್ರ ಬಾರಿ ಶ್ರಮ ಹಾಕಿದ್ದಾರೆ.
1985ರಲ್ಲಿ ಒಮ್ಮೆ ಮಾತ್ರ ಸಿಪಿಎಂ ಅಭ್ಯರ್ಥಿ ಯು. ಸಭಾಪತಿ ಆಯ್ಕೆಯಾಗಿದ್ದರು. 2004ರಲ್ಲಿ ಜೆಡಿಎಸ್ ಅಭ್ಯರ್ಥಿ ಸಂತೋಷ್ ಲಾಡ್ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಉಳಿದಂತೆ ಈ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆಯಾಗಿ ಉಳಿದಿದೆ. ಈ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ ಎನ್ನಲು ಹಲವು ಕಾರಣಗಳಿವೆ. ಸಂಡೂರಿನಿಂದ ಇ.ತುಕಾರಾಂ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ 1,18,279 ಮಹಿಳಾ 1,17,739 ಪುರುಷ ಸೇರಿ ಒಟ್ಟು 2,36,047 ಮತದಾರರಿದ್ದಾರೆ. ಎಸ್ ಸಿ ಸಮುದಾಯದ 41,676, ಎಸ್ ಟಿ ಸಮುದಾಯದ 59,312, ಲಿಂಗಾಯತ ಸಮುದಾಯದ 30,024, 24,701 ಕುರುಬ, 24,588 ಮುಸ್ಲಿಂ, ಹಿಂದುಳಿದ ವರ್ಗಗಳ 41,506 ಇತರೆ ಸಮುದಾಯಗಳ 15,000 ಮತದಾರರಿದ್ದಾರೆ. ಸುಮಾರು 1.50 ಲಕ್ಷದಷ್ಟು ಗ್ರಾಮೀಣ ಮತದಾರರಿದ್ದು ಇವರ ಒಲವು ಯಾರ ಕಡೆಗೆ ಎನ್ನುವ ಗುಟ್ಟು ಬಹಿರಂಗವಾಗಿಲ್ಲ. ಒಳ ಮೀಸಲಾತಿಗಾಗಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿರುವುದು ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ವರದಾನವಾಗಲೂಬಹುದು.
ಬಿಜೆಪಿ ಈ ಭಾರಿ ಚೊಚ್ಚಲ ಗೆಲುವು ದಾಖಲಿಸಲು ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಹಗರಣ, ವಕ್ಫ್ ಆಸ್ತಿ ವಿವಾದ, ಮುಡಾ ಹಗರಣಗಳನ್ನು ಪ್ರಸ್ತಾಪಿಸುತ್ತಾ ಮತದಾರರನ್ನು ಓಲೈಸಲು ಹವಣಿಸುತ್ತಿದೆ. ಬಿ.ವೈ.ವಿಜಯೇಂದ್ರ ಗೆಲುವಿಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ ಬಿಜೆಪಿಯ ಬಣ ರಾಜಕೀಯ ಗೆಲುವಿಗೆ ತೊಡಕಾಗಬಹುದು ಎಂದು ಭಾವಿಸಲಾಗಿದೆ.