ಮುಡಾ ಸೈಟ್ ಹಿಂದಿರುಗಿಸಿರುವುದು ಪತ್ನಿಯ ತೀರ್ಮಾನ: ಸಿಎಂ ಸ್ಪಷ್ಟನೆ

ಬೆಂಗಳೂರು: ನನ್ನ ಪತ್ನಿ ಸೈಟ್ ವಾಪಸ್ ಮಾಡಿರೋದು ನನಗೆ ಗೊತ್ತಿಲ್ಲ. ಸೈಟ್ ವಾಪಸ್ ಮಾಡುವಾಗ ನನ್ನೊಂದಿಗೆ ಚರ್ಚಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ವಿಜಯನಗರದಲ್ಲಿ ಸೈಟ್ ಕೇಳಿರಲಿಲ್ಲ. ಸೈಟ್ ವಿವಾದ ಇಷ್ಟೊಂದು ದೊಡ್ಡದಾಗುತ್ತೆ ಅಂದುಕೊಂಡಿರಲಿಲ್ಲ. ವಿವಾದದಿಂದ ನನ್ನ ಪತ್ನಿ ನೊಂದಿದ್ದಾರೆ. ಈಗ ಸೈಟು ಹಿಂದಿರುಗಿಸಲಾಗಿದೆ. ಮುಡಾದವರು ಕಾನೂನು ಪ್ರಕಾರ ಏನು ಮಾಡಬೇಕೋ ಮಾಡಲಿ ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ತಮ್ಮ ಜಮೀನಿಗೆ ಪರಿಹಾರ ರೂಪವಾಗಿ ಪಡೆದಿದ್ದ ಹದಿನಾಲ್ಕು ಸೈಟುಗಳನ್ನು ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ನಿನ್ನೆ ಹಿಂದಿರುಗಿಸುತ್ತಿರುವುದಾಗಿ ಪತ್ರ ಬರೆದಿದ್ದರು.

More articles

Latest article

Most read