ನ್ಯಾಯಮೂರ್ತಿ ಮೇಲೆ ಶೂ ಎಸೆದಿದ್ದನ್ನು RSS ಏಕೆ ಖಂಡಿಸಲಿಲ್ಲ; ಸಚಿವ ಮಹದೇವಪ್ಪ ಪ್ರಶ್ನೆ

Most read

ಬೆಂಗಳೂರು: RSS ಸಂಘಟನೆಯು ಎಷ್ಟೇ ಮೆರವಣಿಗೆಯನ್ನು ಮಾಡಬಹುದು, ಆದರೆ ಓರ್ವ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಘಟನೆಯನ್ನು ಇವರು ಖಂಡಿಸಿದ್ದಾಗಲೀ, ವಿರೋಧಿಸಿದ್ದನ್ನಾಗಲೀ ನಾನು ಕಾಣಲಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಂಘ ಪರಿವಾರ ಕುರಿತು ಅಕ್ರೋಶ ಹೊರ ಹಾಕಿರುವ ಅವರು, ಇವರ ಹಿಂದುತ್ವದ ಪರಿಧಿಯಲ್ಲಿ ಪರಿಶಿಷ್ಟರಿಗೆ ಸ್ಥಾನವಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?

ಇವರ ಸಂಘ ಹುಟ್ಟಿಕೊಂಡು 100 ವರ್ಷಗಳಾದರೂ ಸಹ ಸಹ ಜೀವಿಗಳ ಮೇಲೆ ಜರುಗುವ ಅವಮಾನಕ್ಕೆ ಮರುಗಬೇಕೆಂದು ಇವರು ಕಲಿತಿಲ್ಲ. ಇಂತವರು ಪ್ರಜಾಪ್ರಭುತ್ವದ ಅಪಾಯಕಾರಿ ಶಕ್ತಿಗಳೇ ಹೊರತು ಮತ್ತೇನೂ ಅಲ್ಲ! ಎಂದಿದ್ದಾರೆ.

More articles

Latest article