ಉತ್ತರ ಭಾರತೀಯರಿಗೆ ದ್ರಾವಿಡ ಭಾಷೆಗಳನ್ನು ಏಕೆ ಕಲಿಸುತ್ತಿಲ್ಲ: ಸ್ಟಾಲಿನ್‌ ಪ್ರಶ್ನೆ

Most read

ಚೆನ್ನೈ: ಉತ್ತರ ಭಾರತದ ಜನರಿಗೆ ತಮಿಳು ಅಥವಾ ದ್ರಾವಿಢ ಭಾಷೆಯನ್ನು ಕಲಿಸಲು ಅನುಕೂಲವಾಗುವಂತೆ ಕೇಂದ್ರ ಏಕೆ ಒಂದೇ ಒಂದೂ ಸಂಸ್ಥೆಯನ್ನೂ ಸ್ಥಾಪಿಸಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ಅವರು ಹಿಂದಿ ಹೇರಲು ಪ್ರಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.

ಗೂಗಲ್ ಟ್ರಾನ್ಸ್‌ಲೇಟ‌ರ್, ಚಾಟ್‌ ಜಿಪಿಟಿ ಮತ್ತು ಕೃತಕ ಬುದ್ಧಿಮತ್ತೆಯಂತಹ ಸಾಧನಗಳು ಜನರಿಗೆ ಭಾಷೆಯ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳಿಗೂ ಅನುಕೂಲಕರವಾಗಿದೆ. ಆದರೂ ಅಗತ್ಯ ತಂತ್ರಜ್ಞಾನವನ್ನು ಮಾತ್ರ ಕಲಿಯುವುದು ಮತ್ತು ಭಾಷೆಯನ್ನು ಹೇರುವುದು ಅವರಿಗೆ ಹೊರೆಯಾಗುತ್ತದೆ ಎಂದು ಟೀಕಿಸಿದ್ದಾರೆ.

ದಕ್ಷಿಣ ರಾಜ್ಯಗಳ ಜನರು ಹಿಂದಿ ಕಲಿಯುವುದರಿಂದ ಮತ್ತು ಉತ್ತರ ರಾಜ್ಯಗಳ ಜನರು ದಕ್ಷಿಣದ ಭಾಷೆಗಳನ್ನು ಕಲಿಯುವುದರಿಂದ ರಾಷ್ಟ್ರೀಯ ಏಕತೆ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕೆ ಮಹಾತ್ಮ ಗಾಂಧೀಜಿಯವರ ಆಶಯದಂತೆ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ’ಯನ್ನು ಸ್ಥಾಪಿಸಲಾಗಿದೆ. ಚೆನ್ನೈನಲ್ಲಿರುವ ಸಭೆಯ ಪ್ರಧಾನ ಕಚೇರಿಯಲ್ಲಿ ಗಾಂಧೀಜಿ ಸ್ವತಃ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈಗ, ಸಭೆಯು ದಕ್ಷಿಣ ರಾಜ್ಯಗಳಲ್ಲಿ 6,000 ಕೇಂದ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೆ ಉತ್ತರ ರಾಜ್ಯಗಳ ಜನರು ದಕ್ಷಿಣದ ರಾಜ್ಯಗಳ ಒಂದು ಭಾಷೆಯನ್ನಾದರೂ ಕಲಿಯಲು ಅನುಕೂಲವಾಗುವಂತೆ ‘ಉತ್ತರ ಭಾರತ ತಮಿಳು ಪ್ರಚಾರ ಸಭಾ’ ಅಥವಾ ‘ದ್ರಾವಿಡ ಭಾಷಾ ಸಭಾ’ದಂತಹ ಸಂಘಟನೆಯನ್ನು ಉತ್ತರ ಭಾರತದಲ್ಲಿ ಸ್ಥಾಪಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಈಸಂದರ್ಭದಲ್ಲಿ ಸ್ಟಾಲಿನ್‌  ಯಾರ ಹೆಸರನ್ನೂ ನಿರ್ದಿಷ್ಟವಾಗಿ ಉಲ್ಲೇಖಿಸದೆ ಟೀಕಿಸಿದ್ದಾರೆ.

More articles

Latest article