ಬಿಜೆಪಿಯವರ ಮೇಲೆ ಇ.ಡಿ ಏಕೆ ದಾಳಿ ಮಾಡಲ್ಲ ? : ಡಿ.ಕೆ.ಶಿವಕುಮಾರ್ ಪ್ರಶ್ನೆ

ಕನಕಪುರ: ಬಿಜೆಪಿ, ಜೆಡಿಎಸ್‌ ನಾಯಕರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಏಕೆ ದಾಳಿ ಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿರುವ ಎಲ್ಲ ಮುಖಂಡರೂ ಪರಿಶುದ್ಧರೇ ಎಂದೂ ಕೇಳಿದ್ದಾರೆ. ?

ತಾಲ್ಲೂಕಿನ ಕೋಡಿಹಳ್ಳಿಯಲ್ಲಿ ಮಾತನಾಡಿದ ಅವರು ಇ.ಡಿ ಅಧಿಕಾರಿಗಳಿಗೆ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಅವರು ಮಾತ್ರ ಗೋಚರಿಸುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ವಿರುದ್ಧ ತನಿಖೆಗೆ ಇ.ಡಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅಗತ್ಯ ಇರಲಿಲ್ಲ  ಎಂದು ಅಭಿಪ್ರಾಯಪಟ್ಟರು. ನನ್ನ ವಿರುದ್ಧ ಪ್ರಕರಣ ದಾಖಲಿಸಿ ತಿಹಾರ್ ಜೈಲಿಗೆ ಕಳಿಸಿದ್ದರು. ನಂತರ ಆ ಪ್ರಕರಣ ವಜಾ ಆಯಿತು. ಆಗ ನಾನು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು. ರಾಜಕೀಯ ಒತ್ತಡಗಳಿಗೆ ಮಣಿದು ಯಾರದ್ದೋ ಕೈಗೊಂಬೆಯಂತೆ ಇ.ಡಿ ಕೆಲಸ ಮಾಡಬಾರದು ಎಂದರು.

More articles

Latest article

Most read