ಎಲ್ಲರಿಗೂ ಶಾಕ್ ಎನಿಸುವಂತ ಸುದ್ದಿಯನ್ನ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿನ್ನೆ ನೀಡಿದ್ದಾರೆ. ನಾಲ್ಕು ವರ್ಷದ ಬಳಿಕ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಇಬ್ಬರು ಒಪ್ಪಿಗೆ ಮೇರೆಗೆ ವಿಚ್ಛೇಧನ ಪಡೆದಿದ್ದಾರೆ. ಆ ಸಂಬಂಧ ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಈ ಸುದ್ದಿ ಎಷ್ಟೋ ಜನಕ್ಕೆ ನಂಬುವುದಕ್ಕೂ ಅಸಾಧ್ಯ, ಎಷ್ಟೋ ಜನಕ್ಕೆ ಬೇಸರದ ಸಂಗತಿ ಕೂಡ. ಆದರೆ ಇದನ್ನು ಒಪ್ಪಲೇಬೇಕಾಗಿದೆ.
ಇನ್ನು ಇಬ್ಬರ ಡಿವೋರ್ಸ್ ಬಗ್ಗೆ ಹಲವರು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಿವೇದಿತಾ ಮಕ್ಕಳು ಬೇಡ ಎಂದಿದ್ದಕ್ಕೆ ಡಿವೋರ್ಸ್ ಆಗುತ್ತಿರಬಹುದು, ಇಬ್ಬರು ಸಿನಿಮಾದಲ್ಲಿ ಬ್ಯುಸಿ ಇರುವುದಕ್ಕೆ ಸಮಯ ಕೊಡಲು ಆಗದೆ ಇರುವ ಕಾರಣಕ್ಕೆ ಡಿವೋರ್ಸ್ ಆಗಿರಬಹುದು ಎಂದು. ಇದರ ನಡುವೆ ಆಶ್ಚರ್ಯ ಎಂಬ ವಿಚಾರವೂ ಓಡಾಡುತ್ತಿದೆ. ಇಬ್ಬರ ಡಿವೋರ್ಸ್ ಗೆ ಸೃಜನ್ ಲೋಕೇಶ್ ಹೆಸರನ್ನು ಎಳೆದು ತರಲಾಗಿದೆ. ಟ್ರೋಲ್ ಪೇಜ್ ಗಳಲ್ಲಿ, ಕಮೆಂಟ್ ಸೆಕ್ಷನ್ ನಲ್ಲಿ ಸೃಜನ್ ಹೆಸರು ಬಳಕೆ ಮಾಡುತ್ತಿದ್ದಾರೆ.
ಸೃಜನ್ ಲೋಕೇಶ್ ಪ್ರೊಡಕ್ಷನ್ ನಲ್ಲಿಯೇ ನಿವೇದಿತಾ ರಿಯಾಲಿಟಿ ಶೋ ಮಾಡ್ತಾ ಇದ್ದರು. ಅವರ ಸಿನಿಮಾದಲ್ಲಿಯೇ ನಾಯಕಿಯಾಗಿ ಘೋಷಣೆಯಾಗಿದೆ. ಸೃಜನ್ ಕೂಡ ಪ್ರೀತಿಯಿಂದ ನಿವಿ ಎಂದೇ ಕರೆಯುತ್ತಾರೆ. ವೇದಿಕೆ ಮೇಲೆ ಕಾಲೆಳೆಯುತ್ತಾ ಇರುತ್ತಾರೆ. ಈ ಬಾರಿ ನಿವೇದಿತಾ ಗೌಡ ಬರ್ತ್ ಡೇಗೂ ಸ್ಪೆಷಲ್ ವಿಡಿಯೋ ಮೂಲಕ ವಿಶ್ ಮಾಡಿದ್ದರು. ಇದೀಗ ಆ ವಿಡಿಯೋ ಟ್ರೋಲ್ ಮಾಡುವ ಮೂಲಕ ಈ ಡಿವೋರ್ಸ್ ವಿಚಾರದ ನಡುವೆ ಸೃಜನ್ ಲೋಕೇಶ್ ಅವರ ಹೆಸರನ್ನು ತಳುಕು ಹಾಕಲಾಗುತ್ತಿದೆ.