ಕಳೆದ 3-4 ದಶಕಗಳಿಂದ ಜಿಲ್ಲೆಯ ಸಮಸ್ಯೆಗಳನ್ನು ಮುಂದಿಟ್ಟು ಚುನಾವಣೆಗಳು ನಡೆಯದೆ ಕೇವಲ ಧರ್ಮದ, ಜಾತಿಯ ಮತ್ತು ದ್ವೇಷದ ವಿಷಯಗಳ ಮೇಲೆ ಚುನಾವಣೆ ನಡೆದದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ವೈದ್ಯೆಯಾದ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ನೈಜ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಆ ಕಾರಣಕ್ಕೆ ಅವರು ಗೆಲ್ಲಲೇಬೇಕು–ಲೋಹಿತ್ ನಾಯ್ಕ, ಸಾಮಾಜಿಕ ಕಾರ್ಯಕರ್ತ.
ಹಲವು ಕಾರಣಗಳಿಂದ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವು ಬಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ನೇರ ಹಣಾಹಣಿಯಿದೆ. ಹಿಂದುತ್ವದ ಟ್ರಂಪ್ ಕಾರ್ಡ್ ಹಿಡಿದು ಕಾಗೇರಿ ಹಾಗೂ ಕ್ಷೇತ್ರದ ಅಭಿವೃದ್ಧಿ ಮುಂದಿಟ್ಟುಕೊಂಡು ಡಾ. ಅಂಜಲಿ ನಿಂಬಾಳ್ಕರ್ ಮತ ಕೇಳುತ್ತಿದ್ದಾರೆ. ಡಾ. ಅಂಜಲಿ ಅವರೇ ಗೆಲ್ಲಬೇಕು ಎಂದು ಆಶಿಸುವ ದೊಡ್ಡ ವರ್ಗವೂ ಇಲ್ಲಿದೆ. ಅವರು ಕೊಡುವ ಕಾರಣಗಳು ಹೀಗಿವೆ-
1) ಡಾ. ಅಂಜಲಿ ನಿಂಬಾಳ್ಕರ್ ಒಬ್ಬ ಸುಶಿಕ್ಷಿತ ಹೆಣ್ಣು ಮಗಳು. ಅವರ ಬಹು ಭಾಷಾ ಕೌಶಲ್ಯದಿಂದಾಗಿ ಕ್ಷೇತ್ರದ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವ ಮತ್ತು ಸಂಸತ್ತಿನಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿದವರು.
2) ಇದುವರೆಗೆ ಕೇವಲ ಕೋಮುವಾದದ ಪ್ರಯೋಗ ಶಾಲೆಯಾಗಿದ್ದ ಉತ್ತರ ಕನ್ನಡದಲ್ಲಿ ಅಂಜಲಿ ನಿಂಬಾಳ್ಕರ್ ಅಭಿವೃದ್ಧಿ ರಾಜಕಾರಣದ ಮಾತನಾಡುತ್ತಿರುವುದು ಹೊಸ ಆಶಾಕಿರಣವಾಗಿದೆ.
3) ಸಾಗರದಂಚಿನ ಮತ್ತು ಕಾಡಿನಂಚಿನ ಜನರ ಆಶೋತ್ತರಗಳಿಗೆ ಈ ವರೆಗೆ ಯಾವತ್ತೂ ಸ್ಪಂದಿಸದ ಕ್ಷೇತ್ರದ ರಾಜಕೀಯ ವ್ಯವಸ್ಥೆಗೊಂದು ಪರ್ಯಾಯ ಚಿಂತನೆ ಅಂಜಲಿ ಆಗಿದ್ದಾರೆ.
4) ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಬೇಕೆಂಬ ಹಲವು ವರ್ಷಗಳ ಕೂಗು ಅರಣ್ಯ ರೋಧನವಾಗಿಯೇ ಉಳಿದಿದೆ. ಸ್ವತ: ವೈದ್ಯೆಯಾಗಿರುವ ಅಂಜಲಿ ಆಸ್ಪತ್ರೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ.
5) ಜಿಲ್ಲೆಯ ಮೀನುಗಾರಿಕೆಗೆ ಪೂರಕವಾದ ಮೂಲಭೂತ ಸೌಕರ್ಯದ ಅಭಿವೃದ್ಧಿ ಮತ್ತು ಮೀನುಗಾರರಿಗೆ ವಸತಿಯ ಸಮಸ್ಯೆಗಳನ್ನು ಓರ್ವ ಹಿಂದುಳಿದ ಮಹಿಳೆಯಾಗಿ ಅರ್ಥೈಸಿ ಕೊಂಡಿದ್ದಾರೆ.
6) ಜಿಲ್ಲೆಯ – ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವಂತಹ ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕ್ರೀಡಾ ತರಬೇತಿ ಕೇಂದ್ರ ಅಥವಾ ಕ್ರೀಡಾ ವಸತಿ ಶಾಲೆ ಮಾಡಲು ಅಂಜಲಿ ಗೆಲ್ಲಬೇಕು.
7) ಜಿಲ್ಲೆಯ ಅತಿಕ್ರಮಣ ಅರಣ್ಯವಾಸಿಗಳಿಗೆ ಸೂಕ್ತ ರಕ್ಷಣೆ ಮತ್ತು ಭೂಮಿ ಹಕ್ಕು ಪತ್ರದ ಭರವಸೆ ಅಂಜಲಿ ನೀಡಿದ್ದಾರೆ.
8) ಜಿಲ್ಲೆಯ ಬುಡಕಟ್ಟು ಸಮದಾಯಗಳ ಮೂಲ ಸಮಸ್ಯೆಗಳನ್ನು ಅರಿತಿರುವ ಅಂಜಲಿ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಸಂಪೂರ್ಣ ಭರವಸೆ ನೀಡಿದ್ದಾರೆ.
9) ಬುದ್ಧಿವಂತ ಜಿಲ್ಲೆಯ ಯುವ ಸಮುದಾಯ ಬೆಂಗಳೂರಿನಂತಹ ದೂರದ ನಗರಗಳಿಗೆ ವಲಸೆ ಹೋಗಿ ಆಗುತ್ತಿರುವ ಸಾಮಾಜಿಕ ಅಸಮತೋಲನವನ್ನು ಸ್ಥಳೀಯ ಉದ್ಯೋಗ ಸೃಷ್ಟಿ ಮಾಡುವ ಮೂಲಕ ಸಾಮಾಜಿಕ ಸಮತೋಲನ ಕಾಪಾಡಲು ಅಂಜಲಿ ಗೆಲ್ಲಬೇಕು.
10) ಜಾಗತಿಕವಾಗಿ ಗುರುತಿಸಲ್ಪಡುವ ಪ್ರವಾಸಿ ಕೇಂದ್ರಗಳು ಉತ್ತರ ಕನ್ನಡದಲ್ಲಿದೆ. ಜೊತೆಗೆ ಕಡಲ ತೀರವೂ ಇದೆ. ಪ್ರವಾಸೋದ್ಯಮ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಿಂಬಾಳ್ಕರ್ ಆಯ್ಕೆಯ ಮೂಲಕ ಪ್ರವಾಸೋದ್ಯಮ ಮತ್ತು ಅದರಿಂದ ಉದ್ಯೋಗ ನಿರ್ಮಾಣ ಸಾಧ್ಯವಿದೆ.
ಒಟ್ಟಾರೆ ಕಳೆದ 3 – 4 ದಶಕಗಳಿಂದ ಜಿಲ್ಲೆಯ ಸಮಸ್ಯೆಗಳನ್ನು ಮುಂದಿಟ್ಟು ಚುನಾವಣೆಗಳು ನಡೆಯದೆ ಕೇವಲ ಧರ್ಮದ, ಜಾತಿಯ ಮತ್ತು ದ್ವೇಷದ ವಿಷಯಗಳ ಮೇಲೆ ಚುನಾವಣೆ ನಡೆದದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ವೈದ್ಯೆಯಾದ ಅಂಜಲಿ ನಿಂಬಾಳ್ಕರ್ ಜಿಲ್ಲೆಯ ನೈಜ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಆ ಕಾರಣಕ್ಕೆ ಅವರು ಗೆಲ್ಲಲೇಬೇಕು.
ಲೋಹಿತ್ ನಾಯ್ಕ
ಚಿಂತಕ – ಸಾಮಾಜಿಕ ಕಾರ್ಯಕರ್ತ
ಇದನ್ನೂ ಓದಿ- ಬುಡಕಟ್ಟು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ: ಡಾ. ನಿಂಬಾಳ್ಕರ್