ದರ್ಶನ್ ಬಿಡುಗಡೆಗೆ ನಟ ನಟಿಯರು ಏನು ಹೇಳಿದ್ರು? ರೇಣುಕಾಸ್ವಾಮಿ ತಂದೆ ಅಭಿಪ್ರಾಯವೇನು?

ಬೆಂಗಳೂರು: ಖ್ಯಾತ ನಟ ದರ್ಶನ್ ಗೆ ಮಧ್ಯಂತರ ಜಾಮೀನು ಸಿಕ್ಕಿರುವುದಕ್ಕೆ ಸ್ಯಾಂಡಲ್ ವುಡ್ ಸಂತಸ ವ್ಯಕ್ತಪಡಿಸಿದೆ. ಅನೇಕ ನಟ ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷವನ್ನು ಹಂಚಿಕೊಂಡಿದ್ದಾರೆ. ಈ ದಿನ ತುಂಬಾ ಖುಷಿಯ ದಿನ ಎಂದು ನಟಿ ರಕ್ಷಿತಾ ಇನ್ ಸ್ಟಾ ದಲ್ಲಿ ಪೋಸ್ಟ್ ಮಾಡಿದ್ದಾರೆ. ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿರುವ ನಂದ ಕಿಶೋರ್ ಅವರ ಕುಟುಂಬದವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಕನ್ನಡ ಚಿತ್ರರಂಗದಲ್ಲಿ ಮತ್ತೆ ಒಳ್ಳೆಯ ದಿನಗಳೂ ಆರಂಭವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಂಡಿದ್ದಾರೆ.

ಜೈಲಿನಿಂದ ದರ್ಶನ್ ಹೊರಬರುತ್ತಿರುವುದು ಖುಷಿ ತಂದಿದೆ. ದೀಪಾವಳಿ ಹೊತ್ತಲ್ಲೇ ದರ್ಶನ್ ಹೊರಬರುತ್ತಿದ್ದಾರೆ. ಇದು ದೀಪಾವಳಿ ಗಿಫ್ಟ್ ಎಂದ ಸಂಜನಾ ಗಲ್ರಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಹೋಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾನೂನು ವ್ಯವಸ್ಥೆಯಲ್ಲಿ ದರ್ಶನ್ ಗೆ ಜಾಮೀನು ಸಿಕ್ಕಿದ್ದು, ನಾವು ಏನನ್ನೂ ಹೇಳಲು ಆಗುವುದಿಲ್ಲ ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಹೇಳಿದ್ದಾರೆ. ಹರಿಹರದಲ್ಲಿ ಮಾತನಾಡಿದ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ನಮ್ಮ ನಿಲುವು. ಕಾನೂನು ವ್ಯವಸ್ಥೆ ಕುರಿತು ನಮಗೆ ನಂಬಿಕೆ ಇದೆ. ಚಿಕಿತ್ಸೆ ಬಗ್ಗೆ ನಾವೇನೂ ಹೇಳಲು ಸಾಧ್ಯವಿಲ್ಲ. ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.

ಜೂನ್ 8ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ವೊಂದರಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11 ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ 2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ.

More articles

Latest article

Most read