ಪಶ್ಚಿಮ ಏಷ್ಯಾ ಯುದ್ಧ ಸಂಧಾನ: ಪಾಕಿಸ್ತಾನ ಬೆನ್ನು ತಟ್ಟಿ ಶ್ಲಾಘಿಸಿದ ಚೀನಾ

ಇಸ್ಲಾಮಾಬಾದ್ ಮಾ.27: ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್‌ ಮೇಲೆ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಜಿ ಸಂಧಾನದ ಯತ್ನಗಳನ್ನು ತೆರೆಮರೆಯಲ್ಲಿ ಮುಂದುವರೆಸಿದ್ದು, ತಾನು ಮಾಡಿದ ಪ್ರಯತ್ನಗಳ ಕುರಿತು ಮಾಹಿತಿಯನ್ನು ಚೀನಾ ಜೊತೆ ಹಂಚಿಕೊಂಡಿದೆ.

ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಷಾಕ್ ದಾರ್ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನತೆ ಕಡಿಮೆಗೊಳಿಸುವಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಭಾಷಣೆ ನಡೆದಿದೆ.

ಈ ವಾರದ ಆರಂಭದಲ್ಲಿ ಪಾಕಿಸ್ತಾನವು ಅಮೆರಿಕಾದಿಂದ ಬಂದ 15 ಅಂಶಗಳ ಪ್ರಸ್ತಾವವನ್ನು ಇರಾನ್‌ಗೆ ತಲುಪಿಸಿತ್ತು. ಇದು ಯುದ್ಧ ನಿಲ್ಲಿಸಲು ವಾಷಿಂಗ್ಟನ್ ವಿಧಿಸುವ ಶರತ್ತುಗಳನ್ನು ಒಳಗೊಂಡಿತ್ತು. ಆದರೆ ಇರಾನ್ ಈ ಬೇಡಿಕೆಗಳನ್ನು “ಅತಿಯಾದವು” (maximalist) ಎಂದು ತಿರಸ್ಕರಿಸಿ, ತನ್ನದೇ ಆದ ಬೇಡಿಕೆಗಳನ್ನು ಮುಂದಿಟ್ಟಿತ್ತು.

ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ವಿದ್ಯುತ್ ಸೌಲಭ್ಯಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು 10 ದಿನಗಳ ಕಾಲ ಮುಂದೂಡಿದ್ದಾರೆ. ಏಪ್ರಿಲ್ 6ರವರೆಗೆ ಈ ಅವಕಾಶ ನೀಡಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಮತ್ತಷ್ಟು ಸಮಯ ಕೊಡುವುದಾಗಿ ಘೋಷಿಸಿದ್ದಾರೆ.

ತಾನು ನಡೆಸುತ್ತಿರುವ ರಾಜಿ ಸಂಧಾನಗಳ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಉಪಪ್ರಧಾನಿ ಇಷಾಕ್ ದಾರ್ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಅಗತ್ಯವನ್ನು ನಾವು ಪುನಃ ದೃಢೀಕರಿಸಿದ್ದೇವೆ. ಸಂಘರ್ಷವನ್ನು ತಕ್ಷಣ ನಿಲ್ಲಿಸುವುದು, ಶಾಂತಿ ಮಾತುಕತೆಗಳ ಪುನರಾರಂಭಿಸುವುದು ನಮ್ಮ ಆದ್ಯತೆಯಾಗಿದೆ. ಸಾಮಾನ್ಯ ಜನರ ರಕ್ಷಣೆ, ಸಾಗರ ಸಂಚಾರ ಮಾರ್ಗಗಳ ಸುರಕ್ಷತೆ ಮತ್ತು ವಿಶ್ವಸಂಸ್ಥೆ ಒಡಂಬಡಿಕೆಗಳ ಪಾಲನೆಗೆ ಎಲ್ಲಾ ಪ್ರಯತ್ನಗಳನ್ನು ನಡೆಸುವುದಾಗಿ ಅವರು ಹೇಳಿದ್ದಾರೆ.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನದ ಈ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಪ್ರಶಂಸೆ ಮತ್ತು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಇಷಾಕ್ ದಾರ್ ತಿಳಿಸಿದ್ದಾರೆ.

ಪ್ರಸ್ತುತ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದಲ್ಲಿ ಗಲ್ಫ್ ದೇಶಗಳ ಮೇಲೆ ಇರಾನ್‌ನ ದಾಳಿಗಳು ಮುಂದುವರೆದ ಬೆನ್ನಲ್ಲೇ ಪಾಕಿಸ್ತಾನದ ಶಾಂತಿ ಮಾತುಕತೆಗಳಿಗೆ ಚೀನಾ ಬೆಂಬಲ ನೀಡುತ್ತಿರುವುದು ಕುತೂಹಲಕರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದ ಆಪ್ತ ದೇಶವಾಗಿ ಚೀನಾ ಗುರುತಿಸಿಕೊಂಡಿರುವುದು ಭಾರತಕ್ಕೆ ಆತಂಕ ಹುಟ್ಟಿಸಿದೆ.

More articles

Latest article

Most read