ಖ್ಯಾತ ಸಾಹಿತಿ ಎಸ್‌ ಎಲ್‌ ಭೈರಪ್ಪ ನಿಧನ; ಗಣ್ಯರ ಸಂತಾಪ

Most read

ಬೆಂಗಳೂರು:ಖ್ಯಾತ ಕಾದಂಬರಿಕಾರ ಎಸ್‌ ಎಲ್‌ ಭೈರಪ್ಪ ನಿಧನರಾಗಿದ್ದಾರೆ. 94 ವರ್ಷದ ಅವರು ವಯೋಸಹಜ ಕಾಯಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳಿಂದ ನಗರದ ರಅಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ 2.38 ನಿಮಿಷಕ್ಕೆ ಅಸ್ತಂಗತರಾಗಿದ್ದಾರೆ.

ಬಲಪಂಥೀಯ ಸಾಹಿತಿ ವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಬಿಜೆಪಿ ಮತ್ತು ಸಂಘ ಪರಿವಾರದ ಪ್ರಬಲ ಪ್ರತಿಪಾದಕರಾಗಿದ್ದರು. ಇದೇ ಪಂಥದ ಆಧಾರದಲ್ಲಿಯೇ ಅವರು ಅನೇಕ ಕಾದಂಬರಿಗಳನ್ನು ರಚಿಸಿರುವುದನ್ನು ಕಾಣಬಹುದಾಗಿದೆ.

ಪರ್ವ, ತಬ್ಬಲಿಯು ನಿನಾದೆ ಮಗನೆ, ಆವರಣದಂತಹ ಕಾದಂಬರಿಗಳು ಸಾಕಷ್ಟು ಟೀಕೆಗೆ ಗುರಿಯಾಗಿದ್ದವು.  ಕೆಲವು ವರ್ಷಗಳ ಹಿಂದೆ ರಚಿಸಲಾಗಿದ್ದ ಆವರಣ ಕಾದಂಬರಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆವರಣ ಎಂಬ ವಿ-ಕೃತಿ ಎಂಬ ವಿಮರ್ಶೆಗಳ ಪುಸ್ತಕ ಪ್ರಕಟವಾಗಿತ್ತು.

“ಆವರಣ ಎಂಬ ವಿಕೃತಿ” ಎಂಬುದು ಎಸ್. ಎಲ್. ಭೈರಪ್ಪ ಅವರ “ಆವರಣ” ಕಾದಂಬರಿಯನ್ನು ವಿಮರ್ಶಿಸುವ ಗೌರಿ ಲಂಕೇಶ್ ಸಂಪಾದಿಸಿದ ವಿಮರ್ಶಾ ಸಂಕಲನದ ಹೆಸರಾಗಿದೆ, ಇದು ಪುಸ್ತಕದ ಟೊಳ್ಳುತನವನ್ನು ಬಯಲುಗೊಳಿಸುವ ಉದ್ದೇಶವನ್ನು ಹೊಂದಿದೆ ಮತ್ತು ಜನಾಂಗೀಯ ದ್ವೇಷ ಹಬ್ಬಿಸುವ ಸಂಚನ್ನು ಹೊಂದಿದೆ ಎಂದು ಆರೋಪಿಸುತ್ತದೆ. “ಆವರಣ” ಕಾದಂಬರಿ ಸ್ವತಃ ಚರ್ಚಾಸ್ಪದವಾಗಿದ್ದು, ಅದರ ಮೇಲೆ ಹುಟ್ಟಿಕೊಂಡ ವಿವಾದಗಳು ಹಾಗೂ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ಈ ವಿ-ಕೃತಿ ರಚನೆಯಾಗಿದೆ.

ಭೈರಪ್ಪ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಸಂತಾಪದಲ್ಲಿ “ಕನ್ನಡ ಸಾರಸ್ವತ ಲೋಕದ ಹಿರಿಯ ಬರಹಗಾರರಾದ ಎಸ್.ಎಲ್.ಭೈರಪ್ಪನವರ ನಿಧನವಾರ್ತೆ ನೋವು ತಂದಿದೆ. ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.  ತಮ್ಮ‌ ಆಪ್ತವೆನಿಸುವ ಬರಹ ಶೈಲಿಯಿಂದಾಗಿ ಅಪಾರ ಓದುಗರನ್ನು ಹೊಂದಿದ್ದ ಭೈರಪ್ಪನವರ ನಿಧನದಿಂದ ಸಾಹಿತ್ಯಲೋಕ ಬಡವಾಗಿದೆ.  ಅವರ ಕುಟುಂಬವರ್ಗ ಮತ್ತು ಓದುಗ ಬಳಗಕ್ಕೆ ನನ್ನ ಸಂತಾಪಗಳುʼ ಎಂದಿದ್ದಾರೆ.

More articles

Latest article