ವಯನಾಡ್ ಭೂಕುಸಿತದಲ್ಲಿ ಸಿಲುಕಿದ್ದ ಅಜ್ಜಿ – ಮೊಮ್ಮಗಳನ್ನು ಕಾಡಾನೆ ಕಾಪಾಡಿದ್ದು ಹೇಗೆ ಗೊತ್ತೆ? ಕಣ್ಣೀರಿನ ಕತೆ!

Most read

ಮನುಷ್ಯನಿಗೆ ಕಾಡು ಆನೆ ಎಂದರೆ ಎಷ್ಟು ಭಯವೊ, ಮನುಷ್ಯನನ್ನು ಕಂಡರೆ ಆನೆಗೂ ಅಷ್ಟೇ ಭಯವಿರುತ್ತದೆ. ನಮ್ಮಿಂದ ಏನಾದರು ತೊಂದರೆಯಾಗಬಹುದು ಎಂದು ಗಾಬರಿಗೊಂಡು ಆನೆ ಮನುಷ್ಯನ ಮನುಷ್ಯನ ಮೇಲೆ ದಾಳಿ ಮಾಡುತ್ತದೆ ಆದರೆ ಇಲ್ಲಿ ಹೇಳ ಹೊರಟಿರುವ ಸ್ಟೋರಿ ಸಂಪೂರ್ಣ ಉಲ್ಟಾ, ವಯನಾಡ್‌ನಲ್ಲಿ ನಡೆದ ಅತ್ಯಂತ ಕೆಟ್ಟ ಪ್ರಕೃತಿ ವಿಕೋಪದ ನಡುವೆಯೂ ಕಾಡಾನೆಯೊಂದು ಅಜ್ಜಿ ಮತ್ತು ಮೊಮ್ಮಗಳನ್ನು ರಕ್ಷಿಸಿದ ಘಟನೆ ವರದಿಯಾಗಿದೆ.

ಹೌದು, ವಯನಾಡ್ ಜಿಲ್ಲೆಯ ಮೆಪ್ಪಾಡಿಯ ಚೂರಲ್ಮಾಳದಲ್ಲಿ ಸುಜಾತ ಮತ್ತವರ ಕುಟುಂಬ ವಾಸವಾಗಿತ್ತು. ಮೂರು ದಿನಗಳ ಹಿಂದೆ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಿಂದ ಹಲವು ಹಳ್ಳಿಗಳು ಸ್ಮಶಾನವಾಗಿ ಪರಿವರ್ತನೆಯಾಗಿದೆ.

ನೀರಿನ ರಭಸಕ್ಕೆ ಗುಡ್ಡ ಕುಸಿದು ಚೂರಲ್ಮಾಳ ಗ್ರಾಮಕ್ಕೆ ಅಪ್ಪಳಿಸಿದ ಪರಿಣಾಮ ಸುಜಾತ ಅವರು ಇದ್ದ ಮನೆ ಒಂದೊಂದು ಕಡೆ ಕುಸಿದು ಬಿದ್ದಿದೆ. ಆ ಸಮಯದಲ್ಲಿ ಅಡುಗೆಮನೆಯ ಗೋಡೆ ಕುಸಿದು ನೀರು ಒಳಗೆ ಬರುತ್ತಿದ್ದಂತೆ, ಮನೆಯಲ್ಲಿ ವಾಸವಾಗಿದ್ದವರ ಪೈಕಿ ಬದುಕುಳಿದಿದ್ದ ಸುಜಾತ ಮನೆಯಿಂದ ಹೊರಹೋಗಲು ಪ್ರಯತ್ನಿಸಿದ್ದಾರೆ. ಆದರೆ ಸುಜಾತ ಅವರ ಮೊಮ್ಮಗಳು ಅಜ್ಜಿ ನಾನು ಇಲ್ಲಿದ್ದಿನಿ ಕಾಪಾಡಿ ಎಂಬ ಶಬ್ದ ಕೇಳಿ ಬರುತ್ತದೆ. ಆವಾಗ ಅಜ್ಜಿಗೆ ಮೊಮ್ಮಗಳಿಗೆ ಏನೂ ಆಗಲಿಲ್ಲ ಎಂಬ ಸಮಧಾನವಾಗುತ್ತೆ, ಅವಳ ಕಿರುಬೆರಳು ಸಿಗುತ್ತೆ, ಹೇಗೊ ಹರಸಾಹಸ ಮಾಡಿ ಅವಳನ್ನು ಮೇಲಕ್ಕೆತ್ತುತ್ತಾರೆ. ಇತ್ತ ನೋಡಿದರೆ ಸುತ್ತಲು ನೀರು, ಮರದ ದಿಮ್ಮಿಗಳು ಈ ನದಿಯಲ್ಲಿ ಈಜದಿದ್ದರೆ ಸಾವು, ಈಜಿದರೆ ಮಾತ್ರ ಉಳಿವು ಎಂದು ಮರದ ದಿಮ್ಮಿಯನ್ನು ಹಿಡಿದು ಈಜುತ್ತಾ ಕಾಡುಕತ್ತೆಯಲ್ಲಿ ಹತ್ತಿರದ ಗುಡ್ಡದ ದಡ ಸೇರುತ್ತಾರೆ. ಆ ಕತ್ತಲಿನಲ್ಲಿ ಎಲ್ಲವೂ ಅಸ್ಪಷ್ಟ, ಅಬ್ಬಾ ಜೀವ ಉಳಿಯಿತ್ತಲ್ಲ ಎಂದು ನೋಡುವಾಗ ಎದುರುಗಡೆ ಕಾಡಾನೆ.

ಅಜ್ಜಿ ಮತ್ತು ಮೊಮ್ಮಗಳಿಗೆ ಏನು ಮಾಡಬೇಕೆಂದು ತೋಚಲಿಲ್ಲ, ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು, ಕೈ ಮುಗಿದು ಆ ಆನೆಗೆ, ಒಂದು ದೊಡ್ಡ ದುರ್ಘಟನೆಯಿಂದ ಪಾರಾಗಿ ಇಲ್ಲಿಗೆ ಬಂದಿದ್ದೇವೆ ನಮ್ಮನ್ನು ಏನೂ ಮಾಡಬೇಡ ಎಂದು ಕೇಳಿಕೊಳ್ಳುತ್ತಾರೆ. ಆ ಆನೆ ನಿಂತ ಜಾಗದಿಂದ ಒಂದಿಂಚೂ ಕದಲಿಲ್ಲ, ಆದರೆ ಆನೆಯೂ ಅಳುತ್ತಿದೆ, ಜೋರಾಗಿ ಮಳೆ ಕೂಡ ಸುರಿಯುತ್ತಿತ್ತು, ನಮ್ಮನ್ನು ರಕ್ಷಣೆ ಮಾಡಲು ನಮ್ಮ ಊರಿನಲ್ಲಿ ಯಾರೂ ಉಳಿದಿಲ್ಲ, ಬೇರೆಯವರು ಬಂದು ರಕ್ಷಣೆ ಮಾಡುವವರೆಗೆ ಅಲ್ಲಿಯೇ ಇರಬೆಕಾಗಿತ್ತು ದಯವಿಟ್ಟು ನಮಗೆ ಏನು ಮಾಡಬೇಡ ಎಂದು ಆ ಆನೆಯ ಕಾಲು ಬುಡದಲ್ಲಿಯೇ ಇವರು ಮಲಗಿದ್ದಾರೆ. ಸುಮಾರು ಐದಾರು ಗಂಟೆಗಳ ಕಾಲ ಆನೆ ಕಾಲಿನ ಬುಡದಲ್ಲೇ ಆಶ್ರಯ ಪಡೆದ ಸುಜಾತ ಮತ್ತು ಮೊಮ್ಮಗಳನ್ನು ಆನೆ ಏನೂ ಮಾಡದೆ ರಕ್ಷಣೆ ನೀಡಿತ್ತು, ಇದೀಗ ಈ ಮಹಿಳೆ ತಮ್ಮ ಅನುಭವದ ಬಗ್ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆ ವೈರಲ್ ಅಗುತ್ತಿದೆ.

ವಯನಾಡ್ ನಲ್ಲಿ ಅಷ್ಟು ದೊಡ್ಡ ಮಟ್ಟದ ಪ್ರಕೃತಿ ವಿಕೋಪದ ಸುಳಿವು ಮನುಷ್ಯನ ಮುಂಚೆ ಪ್ರಾಣಿಗಳಿಗೆ ಸಿಗುತ್ತದೆ. ಇಂತಹ ಪರಿಸ್ಥಿತಿಯನ್ನು ಅರಿತ ಆನೆ ಮನುಷ್ಯನಿಗೆ ಕನಿಕರದಿಂದ ರಕ್ಷಣೆ ಮಾಡಿರಬಹುದು.

ವಯನಾಡ್ ನಲ್ಲಿ ಬದುಕಿಳಿದು ಬಂದವರ ಪ್ರತಿಯೊಬ್ಬರ ಕತೆಯೂ ಕಣ್ಣೀರು ತರಿಸುವಂತದ್ದು, ದೇವರ ನಾಡಿನಲ್ಲಿ ಪ್ರಕೃತಿ ಮುನಿದಿದ್ದು ಊರಿಗೆ ಊರೆ ಸ್ಮಶಾನವಾಗಿ ಪರಿವರ್ತನೆಯಾಗಿದೆ. ಇಡೀ ದೇಶದ ಜನರು ವಯನಾಡ್ ಗಾಗಿ ಪ್ರಾರ್ಥನೆ ಸಲ್ಲಿಸುತ್ತಾ ನೆರವಿಗೆ ನಿಂತಿದೆ. ಮನುಷ್ಯನಿಗೆ ಮನುಷ್ಯನೇ ನೆರವಿಗೆ ಬರುವುದು ಜಾತಿಯಲ್ಲ, ಮತವಲ್ಲ, ಆಸ್ತಿ – ಅಂತಸ್ತಲ್ಲ ಎಂಬುವುದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

More articles

Latest article