ಇರಾನ್ ವಿರುದ್ಧದ ಸಮರ ಇನ್ನುಐದು ವಾರಗಳ ಕಾಲ ಮುಂದುವರಿಕೆ: ವೈಟ್‌ಹೌಸ್‌ನಲ್ಲಿ ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಟ್‌ಹೌಸ್‌ನಲ್ಲಿ ನಡೆದ ‘ಮೆಡಲ್ ಆಫ್ ಆನರ್’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, “ಇರಾನ್ ವಿರುದ್ಧದ ಈ ದಾಳಿಯು ಇನ್ನು ಕನಿಷ್ಠ ನಾಲ್ಕ ರಿಂದ ಐದು ವಾರಗಳ ಕಾಲ ಮುಂದುವರಿಯಲಿದೆ” ಎಂದು ಘೋಷಿಸಿದ್ದಾರೆ.

ಖಮೇನಿ ಹತ್ಯೆ ಸಮರ್ಥನೆ

ಇರಾನ್‌ನ ಸುಪ್ರೀಂ ಲೀಡರ್ ಆಯತುಲ್ಲಾ ಅಲಿ ಖಮೇನಿ ಹತ್ಯೆಯನ್ನು ಇದೇ ವೇಳೆ ಟ್ರಂಪ್ ಸಮರ್ಥಿಸಿಕೊಂಡರು. “ಇರಾನ್ ಅಮೆರಿಕವನ್ನು ತಲುಪಬಲ್ಲ ಶಕ್ತಿಯುತ ಕ್ಷಿಪಣಿಗಳನ್ನು ತಯಾರಿಸುತ್ತಿತ್ತು. ಈ ಅಪಾಯಕಾರಿ ಆಡಳಿತವನ್ನು ಹತ್ತಿಕ್ಕಲು ನಮಗೆ ಸಿಕ್ಕ ಕೊನೆಯ ಅವಕಾಶ ಇದಾಗಿತ್ತು” ಎಂದು ಅವರು ತಿಳಿಸಿದರು. ಅಲ್ಲದೆ, ಬರಾಕ್ ಒಬಾಮಾ ಅವರ ಕಾಲದ ಇರಾನ್ ಪರಮಾಣು ಒಪ್ಪಂದವನ್ನು ರದ್ದುಗೊಳಿಸುವುದಾಗಿ ಅವರು ಪುನರುಚ್ಚರಿಸಿದ್ದಾರೆ.

ಅರಬ್ ರಾಷ್ಟ್ರಗಳ ಬೆಂಬಲ: ಟ್ರಂಪ್ಸ್ಫೋಟಕಹೇಳಿಕೆ

ಇರಾನ್ ವಿರುದ್ಧದ ಅಮೆರಿಕದ ಕಾರ್ಯಾಚರಣೆಗೆ ಅರಬ್ ರಾಷ್ಟ್ರಗಳು ಕೂಡ ಸಾಥ್ ನೀಡುತ್ತಿವೆ ಎಂಬ ಸ್ಫೋಟಕ ಮಾಹಿತಿಯನ್ನು ಟ್ರಂಪ್ ಬಿಚ್ಚಿಟ್ಟಿದ್ದಾರೆ. “ಜನವಸತಿ ಪ್ರದೇಶಗಳ ಮೇಲೆ ಇರಾನ್ ನಡೆಸಿದ ಅಮಾನವೀಯ ಕ್ಷಿಪಣಿ ದಾಳಿಗಳಿಂದ ಅರಬ್ ರಾಷ್ಟ್ರಗಳು ಆಕ್ರೋಶಗೊಂಡಿವೆ. ಈ ಹಿನ್ನೆಲೆಯಲ್ಲಿ ಅವು ಅಮೆರಿಕ ಮತ್ತು ಇಸ್ರೇಲ್‌ನೊಂದಿಗೆ ಕೈಜೋಡಿಸಲಿವೆ” ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More articles

Latest article

Most read