ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ: ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ

ಬರೇಲಿ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕರಿಸಿರುವುದನ್ನು ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತಿಸಿದೆ. ಜಮಾತ್ ಅಧ್ಯಕ್ಷ ಶಹಾಬುದ್ದೀನ್ ರಜ್ವಿ ಬರೆಲ್ವಿ, ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಮರಿಗೆ ಇದರಿಂದ ಪ್ರಯೋಜನವಾಗಲಿದೆ. ಮಸೂದೆ ಪರವಾಗಿ ಮತ ಹಾಕಿರುವ ಎಲ್ಲ ಸಂಸದರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಇಂತಹ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರಕ್ಕೂ ನನ್ನ ಅಭಿನಂದನೆಗಳು ಎಂದು ಬರೆಲ್ವಿ ತಿಳಿಸಿದ್ದಾರೆ.

ಬಡವರು, ದುರ್ಬಲರು ಮತ್ತು ಅನಾಥರನ್ನು ಪೋಷಿಸುವುದು ವಕ್ಫ್ನ ಮೂಲ ಉದ್ದೇಶವಾಗಿತ್ತು. ಆದರೆ, ಆ ಉದ್ದೇಶವನ್ನು ಮರೆತು ಕೆಲವರಷ್ಟೇ ಅದರಿಂದ ಬರುವ ಆದಾಯವನ್ನು ಪಡೆದುಕೊಳ್ಳುತ್ತಿದ್ದರು. ಇದೀಗ ಮಸೂದೆಯು ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರ ಉನ್ನತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿಯೂ ಮಸೂದೆ ಅಂಗೀಕಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಮತ್ತು ವಕ್ಫ್ ಸಂಪನ್ಮೂಲ ಉದ್ದೇಶಿತ ಕೆಲಸಗಳಿಗೆ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಲೋಕಸಭೆಯಲ್ಲಿ ಮಂಡನೆಯಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಗೆ ಸತತ 12 ಗಂಟೆಗಳ ಚರ್ಚೆಯ ನಂತರ ಅಂಗೀಕಾರ ದೊರೆತಿದೆ. ಮಸೂದೆ ಪರ 288 ಮತ್ತು ಮಸೂದೆ ವಿರುದ್ಧ 232 ಮತಗಳು ಚಲಾವಣೆಯಾಗಿದ್ದವು.

More articles

Latest article

Most read