ವಕ್ಫ್ ಮಸೂದೆ: ಇಂದು ಮುಸ್ಲಿಂ, ಮುಂದೆ ಇತರ ಸಮುದಾಯಗಳ ಮೇಲೆ ದಾಳಿಯ ಮುನ್ಸೂಚನೆ: ರಾಹುಲ್‌ ಗಾಂಧಿ ಆರೋಪ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವು ಮುಸ್ಲಿಮರ ಮೇಲಿನ ದಾಳಿ ಮಾತ್ರವಲ್ಲ, ಭವಿಷ್ಯದಲ್ಲಿ ಇತರೆ ಸಮುದಾಯಗಳನ್ನು ಗುರಿಯಾಗಿಸುವ ಪೂರ್ವನಿದರ್ಶನವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಶಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಈಗ ಕ್ಯಾಥೋಲಿಕ್ ಚರ್ಚ್ ಭೂಮಿಯತ್ತ ಗಮನ ಹರಿಸಿದೆ ಎಂಬ ವರದಿಯೊಂದನ್ನು ಹಂಚಿಕೊಂಡು ಕಿಡಿ ಕಾರಿದ್ದಾರೆ. ವಕ್ಫ್ ಮಸೂದೆ ಮುಸ್ಲಿಮರ ಮೇಲೆ ದಾಳಿ ಮಾಡುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಇದೀಗ ಈ ಮಸೂದೆ ಅಂಗೀಕಾರವು ಇತರೆ ಸಮುದಾಯಗಳನ್ನು ಗುರಿಯಾಗಿಸುವ ಪೂರ್ವ ನಿರ್ದಶನವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.

ಇಂತಹ ದಾಳಿಗಳಿಂದ ಜನರನ್ನು ರಕ್ಷಿಸುವುದಕ್ಕೆ ಸಂವಿಧಾನದಿಂದ ಮಾತ್ರ ಸಾಧ್ಯ.  ಆದ್ದರಿಂದ ಸಂವಿಧಾನವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

More articles

Latest article

Most read