ಕೇಂದ್ರ ಬಿಜೆಪಿ ಸರ್ಕಾರದ ಮತಕಳ್ಳತನ ವಿರುದ್ದ ಸಹಿ ಸಂಗ್ರಹ: ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್‌ ಅಭಿಯಾನ ಆರಂಭ

Most read

ಬೆಂಗಳೂರು: ನಗರದ ಪುಲಕೇಶಿನಗರ ವಿಧಾನಸಭಾ ಕಾಂಗ್ರೆಸ್ ಪಕ್ಷದ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಮತಕಳ್ಳತನ ವಿರುದ್ದ ಸಹಿ ಸಂಗ್ರಹ, ಜನಜಾಗೃತಿ ಅಭಿಯಾನ ನಡೆಯಿತು  ಚುನಾವಣೆಯಲ್ಲಿ  ಮತಕಳ್ಳತನ ಮಾಡಿ ಅಧಿಕಾರ ಬಂದಿರುವ ಬಿಜೆಪಿ ಕೇಂದ್ರ ಸರ್ಕಾರದ  ಓಟ್ ಚೋರಿ (ಮತಕಳ್ಳತನ) ವಿರುದ್ದ ಸಹಿ ಸಂಗ್ರಹ ಮತ್ತು ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ.

ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣ್‌ ದೀಪ್‌ ಸುರ್ಜಿವಾಲ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಹಾಗೂ ಕೆಪಿಸಿಸಿ ಕಾರ್ಯಧ್ಯಕ್ಷ ಜಿ.ಸಿ ಚಂದ್ರಶೇಖರ್ ರವರು ಇಂಧನ ಇಲಾಖೆ ಸಚಿವ ಕೆ ಜೆ ಜಾರ್ಜ್ ರವರು ಮತ್ತು ಪುಲಕೇಶಿನಗರ ಶಾಸಕ ಎ. ಸಿ. ಶ್ರೀನಿವಾಸ ರವರು ಮತ್ತು ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಹೆಚ್.ಎಸ್ ಸಹಿ ಹಾಕುವ ಮೂಲಕ, ಜನಜಾಗೃತಿ ಮೂಡಿಸಲು ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.

ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ದೇಶಾದ್ಯಂತ ಮತಕಳ್ಳತನ ವಿರುದ್ದ ಡೊಡ್ಡ ಹೋರಾಟ ಮಾಡಲಾಗುತ್ತಿದೆ.ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವ ಹಕ್ಕು ಇದೆ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸಂವಿಧಾನ ಉಳಿಸಲು ಪ್ರಜಾಪ್ರಭುತ್ವ ಉಳಿಸಲು ರಾಹುಲ್ ಗಾಂಧಿ ರವರು ಮತಕಳ್ಳತನ ವಿರುದ್ದ ದೇಶದ್ಯಾಂತ ಹೋರಾಟ ಮಾಡುತ್ತಿದ್ದಾರೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಮತ್ತು ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

More articles

Latest article