ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ವಿರಾಟ್ ನೀಡಿದ ‘4 ಪದಗಳ’ ಸಂದೇಶ ವೈರಲ್!

ಬೆಂಗಳೂರು ಏ.11: ಐಪಿಎಲ್ 2026ರ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಸೋಲಿನ ನಡುವೆಯೂ ಆರ್‍ಸಿಬಿ ದಿಗ್ಗಜ ವಿರಾಟ್ ಕೊಹ್ಲಿ ಅವರು ತೋರಿಸಿದ ಕ್ರೀಡಾ ಸ್ಫೂರ್ತಿ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಸ್ಥಾನ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್‌ಗೆ ಮಾರುಹೋದ ಕೊಹ್ಲಿ, ಪಂದ್ಯದ ನಂತರ ಅವರಿಗೆ ಹೃದಯಸ್ಪರ್ಶಿ ಸಂದೇಶವೊಂದನ್ನು ನೀಡಿದ್ದಾರೆ.

ಪಂದ್ಯ ಮುಗಿದ ನಂತರ ವೈಭವ್ ಸೂರ್ಯವಂಶಿ ಅವರನ್ನು ಭೇಟಿ ಮಾಡಿದ ವಿರಾಟ್, ಯುವ ಆಟಗಾರನ ಕ್ಯಾಪ್ ಮೇಲೆ ಆಟೋಗ್ರಾಫ್ ನೀಡುವುದರ ಜೊತೆಗೆ “Dear, Vaibhav. Well Done.” (ಪ್ರಿಯ ವೈಭವ್, ಅದ್ಭುತ ಪ್ರದರ್ಶನ) ಎಂದು ಬರೆದಿದ್ದಾರೆ. ಕೇವಲ ನಾಲ್ಕು ಪದಗಳ ಈ ಸಂದೇಶ ಯುವ ಪ್ರತಿಭೆಗೆ ಬೆನ್ನುತಟ್ಟುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುವಾಹಟಿಯಲ್ಲಿ ನಡೆದ ಈ ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 78 ರನ್ ಚಚ್ಚಿದ (8 ಬೌಂಡರಿ, 7 ಸಿಕ್ಸರ್) ಸೂರ್ಯವಂಶಿ, 300ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಇವರು, ಪ್ರಸ್ತುತ 4 ಪಂದ್ಯಗಳಿಂದ 200 ರನ್ ಗಳಿಸಿ ಯಶಸ್ವಿ ಜೈಸ್ವಾಲ್ ಅವರಿಂದ ‘ಆರೆಂಜ್ ಕ್ಯಾಪ್’ ಕಸಿದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‍ಸಿಬಿ 201 ರನ್‌ಗಳ ಸವಾಲಿನ ಮೊತ್ತ ಸೇರಿಸಿತ್ತು. ಆದರೆ ಸೂರ್ಯವಂಶಿ ಅಬ್ಬರ ಮತ್ತು ಧ್ರುವ್ ಜುರೆಲ್ ಅವರ ಅಜೇಯ 81 ರನ್‌ಗಳ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 12 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಈ ಮೂಲಕ ರಾಜಸ್ಥಾನ್ ಸತತ ನಾಲ್ಕನೇ ಗೆಲುವು ದಾಖಲಿಸಿದರೆ, ಹಾಲಿ ಚಾಂಪಿಯನ್ ಆರ್‍ಸಿಬಿ ಈ ವರ್ಷದ ಮೊದಲ ಸೋಲಿನ ರುಚಿ ನೋಡಿದೆ.

More articles

Latest article

Most read