ವಿನಿಶ ಫೋಗಟ್ ಅವರು ಯುಸ್ನೆಲಿಸ್ ಗುಜ್ಮನ್ ಲೋಪೆಜ್ (ಕ್ಯೂಬಾ) ಅವರನ್ನು 5-0 ಅಂತರದಿಂದ ಸೋಲಿಸಿ ಒಲಿಂಪಿಕ್ಸ್ 2024 ರ ಮಹಿಳಾ ಕುಸ್ತಿ 50 ಕೆಜಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ವಿನಿಶ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದಾರೆ.
ವಿನಿಶಾ ಪೋಗಟ್ ಇಂದು ವಿಶ್ವ ನಂಬರ್ 1 ಕುಸ್ತಿಪಟು ಮತ್ತು ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದಿರುವ ಆಟಗಾರ್ತಿ ಯೂಯಿ ಸುಸಾಕಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಈಗ ಫೈನಲ್ ಪ್ರವೇಶ ಮಾಡಿದ್ದಾರೆ.
ವಿನಿಶ ಅವರು ಚಿನ್ನದ ಪದಕಕ್ಕಾಗಿ ಕ್ಯೂಬಾದ ಯುಸ್ನಿಲಿಸ್ ಗುಜ್ಮನ್ ಲೋಪೆಜ್ ಅವರನ್ನು ಎದುರಿಸಲಿದ್ದಾರೆ. ಗೆದ್ದರೆ ಚಿನ್ನಪ ಪದಕಕ್ಕೆ ಮುತ್ತಿಡಲಿದ್ದಾರೆ, ಇಲ್ಲವೇ ಬೆಳ್ಳಿ ಪದಕವಂತು ನಿಶ್ಚಿತ.
ವಿನಿಶ ಅವರು ಕುಸ್ತಿ ಫೆಡರೇಷನ್ ನ ಅಧ್ಯಕ್ಷ ಹಾಗೂ ಲೈಂಗಿಕ ದೌರ್ಜನ್ಯ ಆರೋಪಿ ಬ್ರಿಜ್ ಭೂಷಣ ಸಿಂಗ್ ವಿರುದ್ಧ ಹೋರಾಡಿದ್ದರು. ಇಡೀ ಸರ್ಕಾರವೇ ಅವನ ರಕ್ಷಣೆಗೆ ನಿಂತಾಗ ಎದೆಗುಂದದೆ ಬ್ರಿಜ್ ಭೂಷಣನ ಕಾಮಕಾಂಡವನ್ನು ಬಯಲಿಗೆಳೆದಾಕೆ.