Thursday, December 12, 2024

ನಾಳೆ ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆ : ಕಟ್ಟುನಿಟ್ಟಿನ ಕ್ರಮ

Most read

ಗ್ರಾಮ ಆಡಳಿತ ಅಧಿಕಾರಿಯ 1000 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅ.27ರಂದು ಮುಖ್ಯ ಪರೀಕ್ಷೆ ನಡೆಸುತ್ತಿದ್ದು ಈಗಾಗಲೇ ಸಕಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆ ಅ.27ರಂದು ನಡೆಯಲಿದ್ದು, ಅದನ್ನು ಬರೆಯಲು 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಈ ಸಲುವಾಗಿ 1,173 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ವಸ್ತ್ರ ಸಂಹಿತೆ ಕೂಡ ಇದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪರೀಕ್ಷಾರ್ಥಿಗಳಿಗೆ ತಿಳಿಸಿದ್ದಾರೆ.

ಕಳೆದ ತಿಂಗಳ ಸೆ.26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಓಎಂಆರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆ‌ ಮತ್ತು ವರ್ಶನ್ ಕೋಡ್ ನಮೂದಿಸುವಾಗ ಸುಮಾರು ಒಂಬತ್ತು ಸಾವಿರ ಮಂದಿ ತಪ್ಪು ಮಾಡಿದ್ದು ಪುನಃ ಆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಅಭ್ಯಾಸ ಸಲುವಾಗಿ ಈ ಬಾರಿ ಮಾದರಿ ಓಎಂಆರ್ ಶೀಟ್ ನೀಡಲಾಗಿತ್ತು. ಸರಿಯಾಗಿ ಅಭ್ಯಾಸ ಮಾಡಿಕೊಂಡು ಬನ್ನಿ. ಪುನಃ ತಪ್ಪು ಗಳಾದರೆ ಅದಕ್ಕೆ ಪ್ರಾಧಿಕಾರ ಜವಾಬ್ದಾರಿಯಲ್ಲ.‌ ಮಾದರಿ ಓಎಂಆರ್ ಶೀಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಬೇಡ ಎಂದೂ‌ ಅವರು ಸಲಹೆ ನೀಡಿದ್ದಾರೆ.

More articles

Latest article