ಒಂದು ತಿಂಗಳು ನಂದಿಬೆಟ್ಟಕ್ಕೆ ವಾಹನ ಸಂಚಾರ ಬಂದ್‌

Most read

 ಚಿಕ್ಕಬಳ್ಳಾಪುರ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಇದೇ 24 ರಿಂದ ಏಪ್ರಿಲ್ 25ರವರೆಗೂ ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.

ತಾಲ್ಲೂಕಿನ ನಂದಿಗಿರಿಧಾಮದ ಮೋಟಾರು ರಸ್ತೆಯ ಸರಪಳಿಯಿಂದ 7.70 ಕಿಮೀವರೆಗಿನ ರಸ್ತೆ ನವೀಕರಣ ಕಾಮಗಾರಿ ಕಾರ್ಯವನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಇದೇ 24 ರಿಂದ ಏಪ್ರಿಲ್. 25‌ ರವರೆಗೆ ವಾರಂತ್ಯ ದಿನಗಳಾದ ಶುಕ್ರವಾರ ಸಂಜೆ 6.30ರಿಂದ ಸೋಮವಾರ ಬೆ.8 ಗಂಟೆಯವರೆಗಿನ ಅವಧಿಯನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More articles

Latest article