ನಾಳೆ UPSC ನಡೆಸುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ; ನಿಮ್ಮ ತಯಾರಿ ಹೀರಗಿಲಿ

Most read

ಬೆಂಗಳೂರು: ನಾಳೆ, ಮೇ 25 ರಂದು ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯಲಿದ್ದು, ಮೊದಲನೇ ಪಾಳಿ ಬೆಳಿಗ್ಗೆ 9.30ಕ್ಕೆ ಪ್ರಾರಂಭವಾದರೆ, ಎರಡನೇ ಪಾಳಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪರೀಕ್ಷೆ ಆರಂಭವಾಗಲು 30 ನಿಮಿಷ ಮುಂಚಿತವಗಿ ಪರೀಕ್ಷಾಕೇಂದ್ರ ತಲುಪಿ. ಏಕೆಂದರೆ ಅರ್ಧ ಗಂಟೆ ಇರುವಾಗಲೇ ಪರೀಕ್ಷಾ ಕೇಂದ್ರದ ಬಾಗಿಲು ಮುಚ್ಚಲಾಗುತ್ತದೆ.

ಪರೀಕ್ಷೆಯ ದಿನ ಯಾವುದೇ ಗೊಂದಲ, ಗಡಿಬಿಡಿ ಸೃಷ್ಟಿಯಾಗುವುದನ್ನು ತಡೆಯಲು ಆಯೋಗವು ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.

ಪರೀಕ್ಷೆಗೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು:

ಇ–ಪ್ರವೇಶ ಪತ್ರ ಪ್ರವೇಶಕ್ಕೆ ಇದು ಕಡ್ಡಾಯ. ಪ್ರವೇಶ ಪತ್ರದ ಹಾರ್ಡ್ ಕಾಪಿ ಇಲ್ಲದೆ, ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಫೋಟೊ ಐಡಿಯು ಪ್ರವೇಶ ಪತ್ರದಲ್ಲಿ ಒದಗಿಸಲಾದ ವಿವರಗಳಿಗೆ ಹೊಂದಿಕೆಯಾಗಬೇಕು ಮತ್ತು ಎರಡೂ ಅವಧಿಗಳಿಗೆ ಜತೆಯಲ್ಲಿ ಇಟ್ಟುಕೊಳ್ಳಿ.

ಇ-ಪ್ರವೇಶ ಪತ್ರದ ಫೋಟೋ ಅಸ್ಪಷ್ಟವಾಗಿದ್ದರೆ, ಕಳೆದು ಹೋಗಿದ್ದರೆ, ಹೆಸರು ಮತ್ತು ದಿನಾಂಕ ಇಲ್ಲದಿದ್ದರೆ ಅಭ್ಯರ್ಥಿಗಳು ಹೆಸರು ಮತ್ತು ದಿನಾಂಕ ಮುದ್ರಿತವಾದ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ ಗಳನ್ನು ಎರಡೂ ಹಂತದಲ್ಲಿ ತೆಗೆದುಕೊಂಡು ಹೋಗಬೇಕು.

ಕಪ್ಪು ಬಾಲ್ ಪಾಯಿಂಟ್ ಪೆನ್ ಬಳಸಿ ಗುರುತಿಸಲಾದ ಉತ್ತರಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ. ಯಾವುದೇ ಸ್ಮಾರ್ಟ್ ಅಥವಾ ಡಿಜಿಟಲ್ ಕಾರ್ಯನಿರ್ವಹಣೆಯಿಲ್ಲದ ಅನಲಾಗ್ ವಾಚ್ ಗಳನ್ನು ಪರೀಕ್ಷೆಯಂದು ಧರಿಸಲು ಅವಕಾಶವಿದೆ.

ಪರೀಕ್ಷೆಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಬ್ಯಾಗ್, ಹ್ಯಾಂಡ್ಬ್ಯಾಗ್ ಮತ್ತು ಲಗೇಜ್ ಬ್ಯಾಗ್, ದುಬಾರಿ ಅಥವಾ ಐಷಾರಾಮಿ ವಸ್ತುಗಳು, ಮೊಬೈಲ್ ಫೋನ್ (ಸ್ವಿಚ್ ಆಫ್ ಮಾಡಿಯೂ ತರುವಂತಿಲ್ಲ), ಸ್ಮಾರ್ಟ್ವಾಚ್, ಫಿಟ್ನೆಸ್ ಬಾಂಡ್ ಹಾಗೂ ಇತರ ಯಾವುದೇ ಡಿಜಿಟಲ್ ಉಪಕರಣಗಳು, ಬುಕ್, ನೋಟ್ಸ್ ಅಥವಾ ಯಾವುದೇ ಪ್ರಿಂಟೆಡ್ ಮಟಿರಿಯಲ್ಗಳು ವಿಶೇಷ ಫೀಚರ್ಗಳಿರುವ ಯಾವುದೇ ವಾಚ್ ಬಳಸುವಂತಿಲ್ಲ.

ಪರೀಕ್ಷೆಯ ಮುಖ್ಯ ನಿಯಮಗಳು:

ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದರೆ ಅನರ್ಹಗೊಳಿಸಲಾಗುತ್ತದೆ ಮತ್ತು ಎಫ್ಆರ್ಐ ದಾಖಲಿಸಲಾಗುತ್ತದೆ. ಭವಿಷ್ಯದ UPSC ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಕ್ಕೆ ಒಳಗಾಗಬಹುದು.

ಪ್ರವೇಶ ಪತ್ರದಲ್ಲಿ (ಛಾಯಾಚಿತ್ರ, QR ಕೋಡ್, ಹೆಸರು, ಇತ್ಯಾದಿ) ಯಾವುದೇ ವ್ಯತ್ಯಾಸವಿದ್ದರೆ ತಕ್ಷಣವೇ UPSC ಗೆ [email protected] ನಲ್ಲಿ ವರದಿ ಮಾಡಬೇಕು.

More articles

Latest article