ಲಖನೌ: ಬಿಜೆಪಿ ನಾಯಕರಿಗೂ ಅಶ್ಲೀಲ ವಿಡಿಯೋಗಳಿಗೂ ಅವಿನಾಭಾವ ಸಂಬಂಧ ಇದ್ದ ಹಾಗೆ ಇದೆ. ಇಂತಹುದೊಂದು ಪ್ರಕರಣ ಮಧ್ಯಪ್ರದೇಶದಲ್ಲಿ ವರದಿಯಾಗಿದ್ದು ಪಕ್ಷಕ್ಕೆ ಮುಜುಗರವನ್ನುಂಟು ಮಾಡಿತ್ತು. ಇದೀಗ ಅಂತಹುದೇ ಮತ್ತೊಂದು ಅಶ್ಲೀಲ ವಿಡಿಯೋ ಉತ್ತರ ಪ್ರದೇಶದಲ್ಲೂ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕ ಮನೋಹರ್‌ಲಾಲ್ ಧಕಾಡ್ ಅವರ ಸೆಕ್ಸ್ ವಿಡಿಯೋ ವೈರಲ್ ಆಗಿದ್ದು ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಉತ್ತರಪ್ರದೇಶದ ಬಿಜೆಪಿಯ ಹಿರಿಯ ನಾಯಕರೊಬ್ಬರು ಪಕ್ಷದ ಕಚೇರಿಯಲ್ಲೇ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಗೊಂಡಾ ಜಿಲ್ಲಾ ಬಿಜೆಪಿ ಮುಖಂಡ ಅಮರ್ ಕಿಶೋರ್ ಕಶ್ಯಪ್ ಎಂಬಾತನಿಗೆ ನೋಟಿಸ್ ನೀಡಿದ್ದು,ಏಳು ದಿನಗಳಲ್ಲಿ ಉತ್ತರಿಸುವಂತೆ ಪಕ್ಷ ಸೂಚಿಸಿದೆ.
ರಾಜ್ಯ ರಾಜಧಾನಿ ಲಖನೌದಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಗೊಂಡಾ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಅಮರ್ ಕಿಶೋರ್ ಕಶ್ಯಪ್ ಅನುಚಿತವಾಗಿ ವರ್ತಿಸಿರುವ ವೀಡಿಯೊ ವೈರಲ್ ಆಗಿದೆ. ಈ ವಿಡಿಯೋ ಏಪ್ರಿಲ್ 12 ರಂದು ರೆಕಾರ್ಡ್ ಆಗಿದೆ. ಪಕ್ಷದ ಕಚೇರಿಗೆ ಬಂದಿದ್ದ ಪಕ್ಷದ ಸದಸ್ಯೆ ಅಸ್ವಸ್ಥರಾಗಿರುತ್ತಾರೆ. ಅವರು ವಿಶ್ರಾಂತಿ ಪಡೆಯಲು ಮೊದಲ ಅಂತಸ್ತಿನಲ್ಲಿ ಕೊಠಡಿಗೆ ಬಂದಾಗ ಕಶ್ಯಪ್ ಆಕೆಯನ್ನು ತಬ್ಬಿಕೊಂಡು ಚುಂಬಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋ ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಮತ್ತು ಅಶಿಸ್ತಿನ ತಮ್ಮ ನಡವಳಿಕೆಯನ್ನು ಬೆಳಕಿಗೆ ತಂದಿದೆ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ನಾರಾಯಣ್ ಶುಕ್ಲಾ ಅವರು ಕಶ್ಯಪ್ ಗೆ ನೋಟಿಸ್ ನೀಡಿದ್ದಾರೆ.