ನರ್ತಕಿ ಜತೆ ಅಸಭ್ಯ ವರ್ತನೆ; ಉ.ಪ್ರ. ಬಿಜೆಪಿ ಮುಖಂಡ ಪಕ್ಷದಿಂದ ಉಚ್ಚಾಟನೆ

Most read

ಬಲಿಯಾ: ನರ್ತಕಿಯೊಬ್ಬರ ಜತೆ ನರ್ತಿಸುತ್ತಾ ಅಶ್ಲೀಲವಾಗಿ ವರ್ತಿಸಿದ್ದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ 70 ವರ್ಷದ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ವಿವಾಹ ಸಮಾರಂಭವೊಂದರಲ್ಲಿ ನರ್ತಕಿಯೊಬ್ಬರ ಜತೆ ನರ್ತಿಸುತ್ತಾ ಅಶ್ಲೀಲವಾಗಿ ನಡೆದುಕೊಂಡ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಇದರಿಂದ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟಾಗಿತ್ತು. ಈ ವಿಡಿಯೊವನ್ನು ಸಮಾಜವಾದಿ ಪಕ್ಷದ ನಾಯಕ ಪಂಕಜ್ ರಾಜ್‌ಭರ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಬಬ್ಬನ್‌ ಸಿಂಗ್‌ ಮಾತ್ರ ಈ ವಿಡಿಯೋ ನಿಜವಾದದ್ದಲ್ಲ ನಾನು ಹಾಗೆ ಮಾಡಿಯೇ ಇಲ್ಲ ಎಂದು ರಾಜಕೀಯ ಪಿತೂರಿ ಎಂದು ಆಪಾದಿಸಿದ್ದಾರೆ. ನನಗೆ 70 ವರ್ಷ ವಯಸ್ಸು. ಈ ರೀತಿ ನಾನು ಮಾಡಲು ಸಾಧ್ಯವಿಲ್ಲ, ಇದು ನಕಲಿ ವಿಡಿಯೊ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಇದರ ಹಿಂದೆ ಸ್ಥಳೀಯ ಶಾಸಕಿ ಕೇಟ್ಕಿ ಸಿಂಗ್‌ ಮತ್ತು ಆಕೆಯ ಪತಿಯ ಕೈವಾಡವಿದೆ ನಾನೂ ಸಹ ಈ ಸಂಬಂಧ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಮುಜಗರದಿಂದ ತಪ್ಪಿಸಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರ ಸೂಚನೆಯ ಮೇರೆಗೆ ಶಾಸಕ ಗೋವಿಂದ ನಾರಾಯಣ್ ಶುಕ್ಲಾ ಅವರು ಬಬ್ಬನ್ ಸಿಂಗ್ ರಘುವಂಶಿ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದ್ದಾರೆ.

More articles

Latest article