ಧರ್ಮಸ್ಥಳ ಹತ್ಯೆಗಳು:  ಎಸ್ಐಟಿ ಎದುರು ಹಾಜರಾದ ಕಚೇರಿಗೆ ಉದಯ್ ಜೈನ್; ಇವರಿಗೂ ಪ್ರಕರಣಕ್ಕೂ ಏನು ಸಂಬಂಧ?

Most read

ಮಂಗಳೂರು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಕಳಂಕ ಹೊತ್ತಿದ್ದ ಉದಯ್ ಜೈನ್ ಇಂದು ವಿಶೇಷ ತನಿಖಾ ತಂಡದ (ಎಸ್‌ಐಟಿ)  ಎದುರು ಹಾಜರಾಗಿದ್ದಾರೆ. ಅವರು ಇಂದು ಬೆಳ್ತಂಗಡಿಯಲ್ಲಿರುವ ಎಸ್‌ ಐಟಿ ಕಚೇರಿಗೆ ಆಗಮಿಸಿದ್ದರು.‌

ನಂತರ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 11 ಗಂಟೆಗೆ ಆಗಮಿಸುವಂತೆ ಎಸ್ ಐಟಿ ಅಧಿಕಾರಿಯೊಬ್ಬರು ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಆದ್ದರಿಂದ ಇಂದು ಅವರ ಎದುರು ಹಾಜರಾಗಿದ್ದೇನೆ ಎಂದರು.

ಸೌಜನ್ಯಾ ಕೊಲೆ ಪ್ರಕರಣದಲ್ಲಿ ಉದಯ್ ಜೈನ್, ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲ ಅವರ ಹೆಸರು ಕೇಳಿ ಬಂದಿತ್ತು.

2012 ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣದ ಎಫ್‌ ಐಆರ್ ನಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೂ ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಒಳಪಡಿಸಿದ್ದರು. ನಮ್ಮ ಮಂಪರು ಪರೀಕ್ಷೆಯನ್ನೂ ನಡೆಸಿದ್ದರು. ಆ ಪ್ರಕರಣದಲ್ಲಿ ನಮ್ಮನ್ನು ಆರೋಪಿಗಳನ್ನಾಗಿ ಮಾಡುವ ಸಂಚು ನಡೆದಿತ್ತು ಎಂದರು. ಸಿ

ಸೌಜನ್ಯ ಹತೆಯ ಸಂಬಂಧ ನಡೆದ ಎಲ್ಲ ತನಿಖೆಗಳಲ್ಲೂ ನಮ್ಮ ಪಾತ್ರ ಇಲ್ಲ ಎನ್ನುವುದು ಸಾಬೀತಾಗಿತ್ತು. ಈಗ ಎಸ್ಐಟಿ ನಮ್ಮನ್ನು ವಿಚಾರಣೆಗೆ ಕರೆದಿದೆ. ಇನ್ನೂ ಕೆಲವರನ್ನು ವಿಚಾರಣೆಗೆ ಹಾಜರಾಗುವಂತೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ. ಧೀರಜ್ ಕೆಲ್ಲ ಅವರನ್ನೂ ಕರೆದಿದ್ದಾರೆ.  ಅವರೂ ಬಂದು ಹೇಳಿಕೆ ನೀಡಬಹುದು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಕುರಿತು ಸರ್ಕಾರ ಎಸ್‌ ಐಟಿ ರಚಿಸಿದೆ. ಎಸ್‌ ಐಟಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ.

More articles

Latest article