ಬೆಂಗಳೂರು : ಗುಜರಾತ್ ನ ಸೂರತ್ ಸಮೀಪ ಇರುವ ಭರೂಚ್ ನಲಲಿ ಪಾದಯಾತರಿಗಳ ಮೇಲೆ ಬುಧವಾರ ಸಂಜೆ ಲಾರಿ ಹರಿದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (KRS) ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಚ್. ಲಿಂಗೇಗೌಡ ಹಾಗೂ ಮೂಸಾ ಷರೀಫ್ ಮೃತಪಟ್ಟಿದ್ದಾರೆ.
KRS ಪಕ್ಷದ ಕಾರ್ಯಕರ್ತರು ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತ್ತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ದೆಹಲಿಯಲ್ಲಿ ರಾಷ್ಟ್ರಪತಿಗಳು ಹಾಗು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುವ ಉದ್ದೇಶ ಹೊಂದಿದ್ದರು.
ಈ ಪಾದಯಾತ್ರೆ 55 ದಿನ ಕಳೆದಿದ್ದು, ಗುಜರಾತ್ ನ ಭರೂಚ್ ನಗರವನ್ನು ಬುಧವಾರ ತಲುಪಿತ್ತು.ಈ ವೆಳೆ ಲಾರಿ ಹರಿದು 55 ವರ್ಷದ ಲಿಂಗೇಗೌಡ ಹಾಗೂ 55 ವರ್ಷದ ಮೂಸಾ ಷರೀಫ್ ಸಾವನ್ನಪ್ಪಿದ್ದಾರೆ.
ಮಂಗಳೂರಿನಿಂದ ದೆಹಲಿ ತಲುಪಿ ರಾಷ್ಟ್ರಪತಿಗಳು ಹಾಗು ಪ್ರಧಾನ ಮಂತ್ರಿಯವರಿಗೆ ನೇರವಾಗಿ ಮನವಿ ಸಲ್ಲಿಸಿ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಕಠಿಣ ಕಾನೂನು ರೂಪಿಸಲು ಮನವಿ ಮಾಡುವುದು ತನ್ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ನಾಂದಿ ಹಾಡಬೇಕು ಎಂಬುವುದು ಈ ತಂಡದ ಉದ್ದೇಶವಾಗಿತ್ತು. ಅಕ್ಟೊಬರ್ 17 ರಂದು ಮಂಗಳೂರಿನಲ್ಲಿ ಪಾದಯಾತ್ರೆ ಆರಂಭಿಸಿದ ಈ ತಂಡ ನಿನ್ನೆ 55ನೇ ದಿನ ಗುಜರಾತಿನ ಸೂರತ್ ಹಾಗು ಅಹಮದಬಾದಿನ ನಡುವೆ ಪಾದಯಾತ್ರೆ ಸಾಗಿತ್ತು.
ಮಂಡ್ಯ ಜಿಲ್ಲೆಯ ಮದ್ದೂರಿನ ಸೋಂಪುರ ಗ್ರಾಮದ ಲಿಂಗೇಗೌಡ ಅವರು ಅಬಕಾರಿ ಇನ್ ಸ್ಪೆಕ್ಟರ್ ಹುದ್ದೆಯಲ್ಲಿದ್ದರು. ಕೆಲವು ವರ್ಷಗಳ ಹಿಂದೆ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ರಜಕಾರಣ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮುಸಾ ಮಂಗಳೂರಿನ ನಿವಾಸಿ.
ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮೃತದೇಹಗಳನ್ನು ಇಂದು ಸಂಜೆಯೊಳಗೆ ಬೆಂಗಳೂರಿಗೆ ತರಲಾಗುತ್ತದೆ. ಲಿಂಗೇಗೌಡರು 6 ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರಿನ ಪ್ರವೀಣ್ ನೇತೃತ್ವದಲ್ಲಿ ಮಂಗಳೂರಿನ ಮೂಸ ಷರಿಪ್, ನೌಪುಲ್ ಅಬ್ಬಾಸ್, ಬಾಲಕೃಷ್ಣ, ಶುಕ್ರ ಆಹಮದ್, ಹಮ್ಝಾ ಅವರು ಪಾದಯಾತ್ರೆ ರೂಪಿಸಿದ್ದರು.