ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿಯ ಇಟ್ಟುಕೊಂಡು ಟಿವಿ ಕಾರ್ಯಕ್ರಮ ಮಾಡುವಾಗ ಹಿಂದೂಗಳ ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನ ಸಂಖ್ಯೆಯನ್ನು ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿದ್ದ ಸಂಬಂಧಿಸಿದಂತೆ ಏಷ್ಯಾ ನೆಟ್ ಸುವರ್ಣ ನ್ಯೂಸ್ ಕನ್ನಡ ಸುದ್ದಿವಾಹಿನಿ ಹಾಗೂ ಆ್ಯಂಕರ್ ಅಜಿತ್ ಹನುಮಕ್ಕನವರ್ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.
ತನ್ವೀರ್ ಅಹ್ಮದ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಐಪಿಸಿ 1860ರ ಅಡಿಯಲ್ಲಿನ 505(2) ಸೆಕ್ಷನ್‌ಗಳ ಅಡಿಯಲ್ಲಿ ದ್ವೇಷವನ್ನು ಉತ್ತೇಜಿಸಲು ಯತ್ನಿಸಿರುವ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ.
ಕನ್ನಡದ ಸುದ್ದಿವಾಹಿನಿ ಸುವರ್ಣ ನ್ಯೂಸ್ ಕನ್ನಡ ಚಾನೆಲ್‌ನಲ್ಲೂ ಕೂಡ ಮೇ 9, 2024 ಗುರುವಾರ ರಂದು, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು ಬಿಡುಗಡೆ ಮಾಡಿರುವ ಜನಸಂಖ್ಯಾ ವರದಿಯನ್ನು ಇಟ್ಟುಕೊಂಡು ಕಾರ್ಯಕ್ರಮ ಮಾಡಿದ್ದರು. ಅಲ್ಲಿ, ದೇಶದಲ್ಲಿ ಹಿಂದೂಗಳ ಜನ ಸಂಖ್ಯೆ ಇಳಿಕೆಯಾಗಿದೆ ಹಾಗೂ ಮುಸ್ಲಿಮರ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ತಿಳಿಸಿ. ಜನಸಂಖ್ಯೆ ತಿಳಿಸಲು ಭಾರತದ ಧ್ವಜ, ಮುಸ್ಲಿಮರ ಜನ ಸಂಖ್ಯೆಯನ್ನು ತಿಳಿಸಲು ಪಾಕಿಸ್ತಾನದ ಧ್ವಜ ಬಳಸಿ ದ್ವೇಷ ಕಾರುವ ಸುದ್ದಿ ಪ್ರಸಾರ ಮಾಡಿದ್ದರು.
ಈ ಕುರಿತು ವ್ಯಾಪಕವಾಗಿ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು ಆದರೀಗೆ ಎಫ್ ಐಆರ್ ದಾಖಲಾಗಿದೆ.