ಮೊಟ್ಟೆ ಬಿರಿಯಾನಿ ಈ ರೀತಿಯೂ ಒಮ್ಮೆ ಟ್ರೈ ಮಾಡಿ

Most read

ಬ್ಯಾಚುಲರ್ ಜೀವನಕ್ಕೆ ಕೆಲವೊಂದು ಫುಡ್ ಗಳು ಅನಿವಾರ್ಯ. ಹೊರಗೆ ತಿಂದು ತಿಂದು ಬೋರ್ ಆಗಿರುತ್ತೆ. ಆದರೆ ಮನೆಯಲ್ಲಿ ರುಚಿಯಾಗಿ ಮಾಡೋದಕ್ಕೆ ಕಷ್ಟ ಎನ್ನುವವರಿಗೆ ಸುಲಭವಾಗಿ, ರುಚಿಯಾಗಿ ಮಾಡುವ ಮೊಟ್ಟೆ ಬಿರಿಯಾನಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:
ಎಣ್ಣೆ
ಒಂದತ್ತು ಮೊಟ್ಟೆ
ಪಲಾವ್ ಪದಾರ್ಥಗಳು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಖಾರದ ಪುಡಿ
ಧನ್ಯಾ ಪುಡಿ
ಹಸಿಮೆಣಸಿನಕಾಯಿ
ಟಮೋಟೋ
ಉಪ್ಪು
ಕೊತ್ತಂಬರಿ
ಪುದೀನಾ
ಮೆಂತ್ಯ ಸೊಪ್ಪು

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ಬಿಸಿ ಇಟ್ಟು ನೂರು ಗ್ರಾಂ ಎಣ್ಣೆ ಹಾಕಿ. ಎಣ್ಣೆ ಕಾದಮೇಲೆ ಎರಡು ಪಲಾವ್ ಎಲೆ, ಎರಡು ಪೀಸ್ ಚೆಕ್ಕೆ, ಮೂರು ಲವಂಗ, ಎರಡು ಏಲಕ್ಕಿ, ದೊಡ್ಡ ಮರಾಠಿ ಮೊಗ್ಗು, ಸ್ವಲ್ಪ ಕಾಳು ಮೆಣಸು, ಒಂದು ಅನಾನಸ್ ಹೂ, ಜಾಪತ್ರೆ, ಸೋಂಪು, ಕಸ್ತೂರಿ ಮೇತಿ, ಕಲ್ಲು ಹೂ ಇದೆಲ್ಲವನ್ನು ಹಾಕಬೇಕು. ಒಂದು ಸಲ ಸೌಟ್ ನಲ್ಲಿ ಫ್ರೈ ಮಾಡಿ ಒಂದು ಕಟ್ ಮಾಡಿದ ಈರುಳ್ಳಿ ಹಾಕಿ ಚೆನ್ನಾಗಿ ರೋಸ್ಟ್ ಮಾಡಿ. ಬಳಿಕ ಕಾಲು ಕಟ್ ಅಷ್ಟು ಮೆಂತ್ಯ ಸೊಪ್ಪು, ಸ್ವಲ್ಪ ಪುದೀನ ಹಾಕಿ, ಎರಡು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಟಮೋಟೋ ಹಾಕಿ ಚೆನ್ನಾಗಿ ಫ್ರೈ ಮಾಡಿ. ಹೆಚ್ಚು ಫ್ರೈ ಮಾಡಿದಷ್ಟು ರುಚಿ ಜಾಸ್ತಿ.

ಬಳಿಕ ಒಂದು ಸ್ಪೂನ್ ಚಿಲ್ಲಿ ಪೌಡರ್, ಒಂದೂವರೆ ಸ್ಪೂನ್ ಧನ್ಯ ಪುಡಿ ಹಾಕಿ ಫ್ರೈ ಮಾಡಿ. ಅದಕ್ಕೇನೆ ಒಂದು ಮೂರು ಮೊಟ್ಟೆ ಹೊಡೆದು ಹಾಕಿ, ಸ್ವಲ್ಪ ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕುದಿಸಿ. ಹಸಿಮೆಣಸಿನಕಾಯಿ ಹಾಕಿ. ಬೇಯಿಸಿದ ಮೊಟ್ಟೆಗಳನ್ನು ಸ್ಟಿಕ್ ನಲ್ಲಿ ತೂತು ಮಾಡಿ ಮಾಸಾಲೆ ಒಳಗೆ ಹಾಕಿ. ಯಾಕಂದ್ರೆ ಸ್ವಲ್ಪ ಮಸಾಲೆ ಮೊಟ್ಟೆ ಒಳಗೆ ಹಿಡಿಯುತ್ತೆ. ಬಳಿಕ ಅರ್ಧ ಕೆಜಿ ಅಕ್ಕಿ ಹಾಕಿ, ಅಕ್ಕಿಗೆ ತಕ್ಕನಾಗಿ ನೀರು ಹಾಕಿ, ಕೊತ್ತಂಬರಿ ಹಾಕಿ ಮೇಲೆ ಸ್ವಲ್ಪ ಉಪ್ಪು ಹಾಕಿ ಧಮ್ ಕಟ್ಟಿಸಿ. ಆಮೇಲೆ ರೆಡಿ ನೋಡಿ ಮೊಟ್ಟೆ ಬಿರಿಯಾನಿ.‌

More articles

Latest article