ಒಪ್ಪಂದ ಸರಿಯಾಗದಿದ್ದರೆ ಮತ್ತೆ ದಾಳಿ : ಟ್ರಂಪ್‌ ಎಚ್ಚರಿಕೆ

 ಅಮೆರಿಕ : ಮತ್ತೆ ಇರಾನ್ ವಿರುದ್ಧದ ಸಂಘರ್ಷ ಉಲ್ಬಣಗೊಳ್ಳುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

 ಎರಡೂ ಕಡೆಯವರು ನಿಜವಾದ ಒಪ್ಪಂದಕ್ಕೆ ಬರದಿದ್ದರೆ ಅತಿ ದೊಡ್ಡ  ಮತ್ತು ಬಲವಾದ ಗುಂಡಿನ ದಾಳಿ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಅಲ್ಲದೇ , ನಿಜವಾದ ಒಪ್ಪಂದವನ್ನು ಅಂತಿಮಗೊಳಿಸುವವರೆಗೆ ಇರಾನ್ ಮತ್ತು ಸುತ್ತಮುತ್ತ ಅಮೆರಿಕದ ಪಡೆಗಳನ್ನು ನಿಯೋಜಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಆಕ್ರಮಣಕಾರಿಯಾಗಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಎರಡು ವಾರಗಳ ಕದನ ವಿರಾಮಕ್ಕೆ ಇರಾನ್ ಒಪ್ಪಿಕೊಂಡ ಒಂದು ದಿನದ ನಂತರ ಅವರಿಂದ ಈ  ಹೇಳಿಕೆಗಳು ಬಂದಿವೆ. 

ಟ್ರುತ್ ಸೋಷಿಯಲ್‌ನಲ್ಲಿನ ಪೋಸ್ಟ್‌ನಲ್ಲಿ, ಟ್ರಂಪ್, “ಎಲ್ಲಾ ಯುಎಸ್ ಹಡಗುಗಳು, ವಿಮಾನಗಳು ಮತ್ತು ಮಿಲಿಟರಿ ಸಿಬ್ಬಂದಿ, ಹೆಚ್ಚುವರಿ ಮದ್ದುಗುಂಡುಗಳು, ಶಸ್ತ್ರಾಸ್ತ್ರಗಳು ಮತ್ತು ಈಗಾಗಲೇ ಗಣನೀಯವಾಗಿ ಕೆಳಮಟ್ಟಕ್ಕಿಳಿದಿರುವ ಶತ್ರುವಿನ ಮಾರಕ ವಿಚಾರಣೆ ಮತ್ತು ನಾಶಕ್ಕೆ ಸೂಕ್ತವಾದ ಮತ್ತು ಅಗತ್ಯವಿರುವ  ವಸ್ತುಗಳು ಇರಾನ್‌ನಲ್ಲಿ ಸನ್ನದ್ಧವಾಗಿ ಇರಲಿವೆ. ನಿಜವಾದ ಒಪ್ಪಂದವನ್ನು ತಲುಪುವವರೆಗೆ ಜಾರಿಯಲ್ಲಿರುತ್ತವೆ ಎಂದು ಹೇಳಿದರು.

ನಿಜವಾದ ಒಪ್ಪಂದು ಜಾರಿಯಾಗದಿದ್ದರೆ,  ಗುಂಡು ಹಾರಿಸುವುದು ಮತ್ತೆ  ಪ್ರಾರಂಭವಾಗುತ್ತದೆ. ಯಾರೂ ಹಿಂದೆಂದೂ ನೋಡದಷ್ಟು ದೊಡ್ಡದಾಗಿರುತ್ತದೆ  ಎಂದು  ಹೇಳಿದ್ದಾರೆ.

More articles

Latest article

Most read