ಮದ್ಯ ಮಾರಾಟ ಬಂದ್ ಗೆ ಪ್ರವಾಸದ್ಯೋಮ ಹೋಟೆಲ್ ಮಾಲೀಕರ ಸಂಘ ವಿರೋಧ

Most read

ಬೆಂಗಳೂರು: ವೈನ್ ಮರ್ಚೆಂಟ್ ಅಸೋಶಿಯೇಶನ್ ಇದೇ ನ.20 ರಂದು ಕರೆ ನೀಡಿರುವ ಮದ್ಯ ಮಾರಾಟ ಬಂದ್ ಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ಪ್ರಧಾನ ಕಾರ್ಯದರ್ಶಿ ಗೋವಿಂದ. ದು.ಕೌಲಗಿ ಅವರು ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದುವರೆಗೂ ನಮ್ಮನ್ನು ಸಂಪರ್ಕಿಸಿಲ್ಲ. ಬಂದ್ ಕುರಿತು ಚರ್ಚೆ ನಡೆಸಿಲ್ಲ. ಒಂದು ವೇಳೆ ಮದ್ಯ ಮಾರಾಟ ಬಂದ್ ಮಾಡಿದರೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಹೇಳಿದರು.


ಪ್ರವಾಸದ್ಯೋಮ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎರಡು ಸಾವಿರಕ್ಕಿಂತ ಅಧಿಕ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮದ ಅಡಿಯಲ್ಲಿ ನಡೆಯುತ್ತಿರುವ ಹೋಟೆಲ್, ಬಾರ್ ಗಳು ಹೆಚ್ಚಿನ ಪ್ರಮಾಣದ ಲೈಸನ್ಸ್ ಮೊತ್ತವನ್ನು ಭರಿಸುತ್ತಿದ್ದು, ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಲಾಭಾಂಶವನ್ನು ಶೇ. 10ರಿಂದ 20ರಷ್ಟು ಹೆಚ್ಚಿಸಬೇಕು, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮಧ್ಯ ಸೇವನೆ ಹಾಗೂ ಊಟೋಪಚಾರ ಮಾಡಲು ದಿನದ 24ಗಂಟೆ ಸೇವೆಗೆ ಅವಕಾಶ ನೀಡಬೇಕು. ಜಿಎಸ್ ಟಿ, ಆಸ್ತಿ ತೆರಿಗೆ,ಇತರೆ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಸಂಘದ ಅಧ್ಯಕ್ಷ ಉಮೇಶ್ ಬಾಳಿ ಹೇಳಿದರು.


ಅಬಕಾರಿ ಇಲಾಖೆಯ ಸಿ,ಎಲ್ -2 ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ಮತ್ತು ಗ್ರಾಮೀಣ ಪ್ರದೇಶ ಮತ್ತು ಡಾಬಾಗಳಲ್ಲಿ ಯಥೇಚ್ಚಚಾಗಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರವಾಸಿ ಹೋಟೆಲ್, ಬಾರ್ ಗಳಿಗೆ ಭಾರೀ ತೊಂದರೆಯಾಗಿದೆ. ಸಿ.ಎಲ್ -9 ಸನ್ನದುದಾರರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ,ಸಿ.ಎಲ್ -7,ಸಿಎಲ್ -8 ಹಾಗೂ ಸಿಎಲ್ -4 ಸನ್ನದುದಾರರಿಗೆ ಮದ್ಯ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ಅವರು ತಿಳಿಸಿದರು.


ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆಎಂದು ಆರೋಪಿಸಿ ರಾಜ್ಯ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಇದೇ ತಿಂಗಳ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದೆ.

More articles

Latest article