31 ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ

Most read

ತುಮಕೂರು ನಗರದ ಶ್ರೀ ಕೊಲ್ಲಾಪುರದಮ್ಮ ದೇವಿಯ ಆಶೀರ್ವಾದ ಪಡೆದು ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಮತ್ತು ಬೂತ್ ಸಮಿತಿಯ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಚಾಲನೆ ನೀಡಿದರು… ಇದೇ ವೇಳೆ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು.

ನಂತರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಬಲವರ್ಧನೆ ಮತ್ತು ಪಕ್ಷದ ಸಂಘಟನೆ ಮಾಡಲು ಒತ್ತು ನೀಡಿದ್ದೇವೆ.ನಮ್ಮ ಪಕ್ಷದ ವರಿಷ್ಠರು, ಮಾಜಿ ಪ್ರಧಾನಿ ದೇವೇಗೌಡರು ಸದಸ್ಯತ್ವ ನೋಂದಣಿ ಹಾಗೂ ಬೂತ್ ಕಮಿಟಿ ರಚನೆ ಮಾಡಬೇಕೆಂದು ಕನಸುಗಳನ್ನ ಕಂಡು ಆದೇಶ ಹೊರಡಿಸಿದ್ದರು. ಹಾಗೆಯೇ ಕೇಂದ್ರ ಸಚಿವರಾದ ಕುಮಾರಣ್ಣ ಅವರ ಆದೇಶದ ಮೇರೆಗೆ ಇಂದು ತುಮಕೂರಿನಲ್ಲಿ ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿದ್ದೇವೆ ಎಂದರು…

ತುಮಕೂರು ಜಿಲ್ಲೆಯಲ್ಲಿ ಪಕ್ಷದ ನೋಂದಣಿ ಹಾಗೂ ಬೂತ್ ಮಟ್ಟದ ಸಮಿತಿಯ ಮೊದಲ ಸಭೆಯನ್ನ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ 25-30 ವರ್ಷಗಳ ಕಾಲ ಸದೃಢವಾಗಿ ಪಕ್ಷವನ್ನು ಕಟ್ಟಿ ಬೆಳೆಸಬೇಕು, ದೇವೇಗೌಡರು ಮತ್ತು ಕುಮಾರಣ್ಣನ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿದಿದ್ದೀರಿ, ಪ್ರತಿಯೊಬ್ಬರನ್ನು ಗುರುತಿಸಿ, ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಗಳಲ್ಲಿ ಅವಕಾಶಗಳನ್ನ ಕೊಡಲಾಗುತ್ತೆ, ಹಾಗೆಯೇ ಪಕ್ಷದ ಕಡೆಯಿಂದ ಗೌರವ ಕೊಡಲಾಗುತ್ತದೆ ಭರವಸೆ ನೀಡಿದ್ರು.

ಜೆಡಿಎಸ್ ಪಕ್ಷಕ್ಕೆ ಶಕ್ತಿ ಇದೆ

ಕುಮಾರಣ್ಣನವರು ಕೇಂದ್ರ ಸಚಿವರಾದ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು, ಹೊಸ ಹುಮ್ಮಸ್ಸು ಪ್ರಾರಂಭವಾಗಿದೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಶಕ್ತಿ ಇದೆ. ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 9 ಶಾಸಕರನ್ನ ಆಯ್ಕೆ ಮಾಡಿರುವ ಇತಿಹಾಸ ಇವತ್ತು ಕಣ್ಮುಂದೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೂಡ ಶಾಸಕರು ಹೆಚ್ಚಾಗಿ ಗೆಲ್ಲದೆ ಇರಬಹುದು ಆದರೆ ಇವತ್ತು ಜಿಲ್ಲೆಯ ಜನತೆಯ ಆಶೀರ್ವಾದದಿಂದ ಅತೀ ಹೆಚ್ಚು ಮತಗಳು ಜನತಾದಳ ಪಕ್ಷದ ಪರವಾಗಿ ಕೃಡಿಕರಿಸಿದೆ.

2018ರ ಕಾಂಗ್ರೆಸ್ ಪಕ್ಷ, ರಾಷ್ಟೀಯ ಕಾಂಗ್ರೆಸ್ ನಾಯಕರು ಮನೆ ಬಾಗಿಲಿಗೆ ಬಂದಿದ್ದರು. ಕುಮಾರಣ್ಣ ಅವರನ್ನ 5‌ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ, ನಾವೆಲ್ಲರೂ ನಿಮಗೆ ಸಹಕಾರ ಕೊಡುತ್ತೇವೆ ಎಂದು ಮಾತುಕೊಟ್ರು, ಆದರೆ ತುಮಕೂರು ಜಿಲ್ಲೆಯಲ್ಲಿ ದೇವೇಗೌಡರನ್ನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಿ ಕತ್ತು ಕೊಯ್ಯುವ ಕೆಲಸ ಮಾಡಿದ್ದಾರೆ. ಆದ್ರೆ ಜೆಡಿಎಸ್ ಬಿಜೆಪಿ ಪಕ್ಷ ಒಗ್ಗಟ್ಟಾಗಿ ತುಮಕೂರಿನಲ್ಲಿ ವಿ ಸೋಮಣ್ಣ ಅವರನ್ನ ಕೇಂದ್ರ ಸಚಿವರನನ್ನಾಗಿ ಮಾಡಿದ್ದಾರೆ.

ನಿಮ್ಮೆಲ್ಲರ ಹೋರಾಟದ ಪ್ರತಿಫಲವಾಗಿ ಜೆಡಿಎಸ್ ಪಕ್ಷ ಹಳೇ ಮೈಸೂರು ಪ್ರಾಂತ್ಯದಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ 12 ಕ್ಷೇತ್ರಗಳಲ್ಲಿ NDA ಅಭ್ಯರ್ಥಿಗಳು ಗೆದ್ದಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮಿತೃತ್ವವನ್ನ ರಾಜ್ಯದ ಜನತೆ ಒಪ್ಪಿ ಸಹಿ ಹಾಕಿದ್ದಾರೆ.

ಪಕ್ಷದ ಸಂಘಟನೆ ಅಂತ ಬಂದಾಗ ಬಿಜೆಪಿಯವರು ತಮ್ಮದೇ ಆದ ಸಂಘಟನೆ ಮುಂದುವರೆಸಿದ್ದಾರೆ. ಜನತಾದಳ ಪಕ್ಷವು ಕೂಡ ಸಂಘಟನೆಯಲ್ಲಿ ಹೆಚ್ಚು ಒತ್ತು ಕೊಟ್ಟು ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಆಸ್ತಿತ್ವ ಉಳಿಸಿಕೊಳ್ಳವ ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು…

ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರ ಸಲಹೆ ಪಡೆಯುತ್ತೇವೆ

ಪಕ್ಷ ನಮಗೆ ಸಾಕಷ್ಟು ಕೊಟ್ಟಿದೆ, ನಾವು ಪಕ್ಷಕ್ಕೆ ಏನು ಕೊಟ್ಟಿದೀವಿ ಅನ್ನುವುದು ಮುಖ್ಯ. ಹಾಗಾಗಿ ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ನಿಮ್ಮ ಜೊತೆ ನಾವೆಲ್ಲರೂ ನಿಲುತ್ತೇವೆ. ಜಿಲ್ಲೆಯಲ್ಲೂ ಪ್ರವಾಸ ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ಕೊಟ್ಟರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು ಅವರು, ಹಿರಿಯರು ನಾಯಕರಾದ ಕುಣಿಗಲ್ ಡಿ. ನಾಗರಾಜಯ್ಯ ಅವರು, ಮಾಜಿ ಶಾಸಕರಾದ ವೀರಭದ್ರಯ್ಯ ಅವರು, ಸುಧಾಕರ್ ಲಾಲ್ ಅವರು, ಹೆಚ್ ನಿಂಗಪ್ಪ ಅವರು, ಹರಿಹರ ತುಮಕೂರು ಜಿಲ್ಲಾ ಜಿಲ್ಲಾಧ್ಯಕ್ಷರಾದ ಆಂಜಿನಪ್ಪ ಅವರು, ಬೆಂಗಳೂರು ಗ್ರಾಮೀಣ ವಿಭಾಗದ ಮೇಲುಸ್ತುವಾರಿಯಾದ ಕೆ. ವಿವೇಕಾನಂದ ಅವರು,ತುಮಕೂರು ಜಿಲ್ಲಾ ಬೂತ್ ಸಮಿತಿಯ ಉಸ್ತುವಾರಿಗಳಾದ ಎ.ಮಂಜುನಾಥ್ ಅವರು, ಶಿವ ಶಂಕರ್ ಅವರು, ಹಾಗೂ ತಿಪಟೂರು ಶಾಂತಕುಮಾರ್, ಶ್ರೀ ಶಿರಾ ಉಗ್ರೇಶ್ ಅವರು ತಾಲ್ಲೂಕು ಜೆಡಿಎಸ್ ಅಧ್ಯಕ್ಷರುಗಳು ಹಾಗೂ ತುಮಕೂರು ಜಿಲ್ಲಾ ಜೆಡಿಎಸ್ ಪದಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

More articles

Latest article