65 ವರ್ಷದ ಮಾಜಿ ಸಂಸದನನ್ನು ವರಿಸಿದ 50 ವರ್ಷದ ಟಿಎಂಸಿ ಸಂಸದೆ ಮಹುವಾ

Most read

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಅವರು ವಕೀಲ ಹಾಗೂ ಬಿಜು ಜನತಾ ದಳ (ಬಿಜೆಡಿ) ಪಕ್ಷದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಜರ್ಮನಿಯಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಲ್ಲ ಮೂಲಗಳ ಪ್ರಕಾರ, 50 ವರ್ಷದ ಮೊಯಿತ್ರಾ ಅವರು 65 ವರ್ಷದ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ಜೂನ್ 3ರಂದು ಜರ್ಮನಿಯಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

ಆದರೆ ಇದುವರೆಗೂ ವಿವಾಹ ಕುರಿತು ಮೊಯಿತ್ರಾ ಅಥವಾ ಮಿಶ್ರಾ ಯಾವುದೇ ಹೇಳಿಕೆ ನೀಡಿಲ್ಲ. ಟಿಎಂಸಿ ಅಥವ ಬಿಜೆಡಿ ಪಕ್ಷದಿಂದಲೂ ಪ್ರತಿಕ್ರಿಯೆ ಬಂದಿಲ್ಲ. ಆದರೆ ಮಹುವಾ ಮೊಯಿತ್ರಾ ಮತ್ತು ಪಿನಾಕಿ ಮಿಶ್ರಾ ಅವರ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಮಹುವಾ ಮೊಯಿತ್ರಾ ಅವರು , ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಎರಡನೇ ಅವಧಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇವರು ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಶಾಸಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೊಯಿತ್ರಾ ಅವರು ಈ ಹಿಂದೆ ಡೆನ್ಮಾರ್ಕ್‌ನ ಉದ್ಯಮಿ ಲಾರ್ಸ್ ಬ್ರೋರ್ಸನ್ ಅವರನ್ನು ವರಿಸಿದ್ದರು. ನಂತರ ವಿಚ್ಛೇದನ ಪಡೆದಿದ್ದರು.

ಬಿಜು ಜನತಾದಳ (ಬಿಜೆಡಿ) ನಾಯಕರಾದ ಮಿಶ್ರಾ, ಸುಪ್ರೀಂ ಕೋರ್ಟ್‌ನಲ್ಲಿ ಹಿರೀಯ ವಕೀಲರಾಗಿದ್ದಾರೆ. ಪುರಿಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

More articles

Latest article