ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಕೆ ನಿಜ: ತಪ್ಪೊಪ್ಪಿಕೊಂಡ ಟಿಟಿಡಿ

Most read

ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ಕಲಬೆರಕೆ ತುಪ್ಪ ಹಾಗೂ ಪ್ರಾಣಿ ಕೊಬ್ಬು ಬಳಕೆ ಮಾಡಿರೋದು ನಿಜ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಒಪ್ಪಿಕೊಂಡಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ ಟಿಟಿಡಿ ಎಕ್ಸ್‌ಕ್ಯೂಟೀವ್ ಆಫೀಸ‌ರ್ ಶ್ಯಾಮಲಾ ರಾವ್, ಈ ಪ್ರಸಾದಕ್ಕೆ ಬಳಸುವ ತುಪ್ಪದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಿ ಟೆಸ್ಟ್ ಮಾಡಲಾಗಿತ್ತು. ಲಡ್ಡು ತಯಾರಿಕೆಗೆ ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು, ದನದ ಕೊಬ್ಬು, ಹಂದಿಯ ಕೊಬ್ಬು, ಪಾಮಾಯಿಲ್, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಮೆಕ್ಕೆಜೋಳ ಎಣ್ಣೆ ಬೆರೆಸಿದ ಕಡಿಮೆ ಗುಣಮಟ್ಟವಿರುವ ತುಪ್ಪ ಪೂರೈಸಲಾಗಿದೆ ಎಂದು ಗುಜರಾತ್‌ನ ಎನ್‌ಡಿಡಿಬಿ ಸಿಎಎಲ್‌ಎಫ್‌ ಲ್ಯಾಬ್‌ನ ವರದಿಯಲ್ಲಿ ದೃಢಪಟ್ಟಿದೆ. ತುಪ್ಪ ಪೂರೈಸಿದ ಎಆರ್ ಡೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಟಿಟಿಡಿ ಬಳಿ ಲ್ಯಾಬ್ ಇಲ್ಲದಿರುವುದರಿಂದ ಈ ಹಿಂದೆ ಟೆಸ್ಟ್ ಮಾಡಿರಲಿಲ್ಲ. 20:32ರಷ್ಟು ಕಲಬೆರಕೆ ತುಪ್ಪ ಇರುವುದು ದೃಢಪಟ್ಟಿದೆ. ಹಿಂದಿನ ಸರ್ಕಾರ ತುಪ್ಪ ಪೂರೈಕೆಗೆ 5 ಕಂಪನಿಗಳನ್ನು ಅಂತಿಮಗೊಳಿಸಿತ್ತು. ಅದರಂತೆ ತುಪ್ಪ ತರಿಸಿಕೊಳ್ಳಲಾಗಿದೆ. ಈಗ ಚಂದ್ರಬಾಬು ನಾಯ್ಡು ಸಿಎಂ ಆದಮೇಲೆ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ಬಳಕೆ ಇಲ್ಲದಂತಾಗಿದೆ. ಎಂದು ಶ್ಯಾಮಲಾ ರಾವ್‌ ಮಾಹಿತಿ ನೀಡಿದ್ದಾರೆ.

ತಿರುಪತಿ ತಿರುಮಲದಲ್ಲಿ ಗುಣಮಟ್ಟ ಪರೀಕ್ಷೆ ಮಾಡಲು ಉತ್ತಮ ಲ್ಯಾಬ್ ಇಲ್ಲ ಎಂಬ ಕಾರಣದಿಂದಾಗಿ ಈ ಕಂಪನಿಗಳು ನಮಗೆ ಕಲಬೆರಕೆ ತುಪ್ಪವನ್ನು ಕೊಟ್ಟಿದ್ದಾರೆ. ಈಗ ನಮಗೆ ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಮಾಡುತ್ತಿದ್ದು ಉತ್ತಮವಾಗಿ ಲಡ್ಡು ತಯಾರಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಿರುಪತಿಯಲ್ಲಿ ನಾವು ಪ್ರಯೋಗಾಲಯವನ್ನು ಸ್ಥಾಪಿಸುತ್ತೇವೆ. NDDB ಲ್ಯಾಬ್ ರೂ. 75 ಲಕ್ಷ ಮೌಲ್ಯದ ಉಪಕರಣಗಳನ್ನು ನೀಡಲು ಮುಂದೆ ಬಂದಿದೆ ಎಂದು ತಿಳಿಸಿದರು.

More articles

Latest article