Friday, December 12, 2025

ನಮ್ಮನ್ನು ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು : ಬಿಕೆ ಹರಿಪ್ರಸಾದ್

Most read

ಬಿಜೆಪಿಯವರು ಗೋಡ್ಸೆ ಅನುಯಾಯಿಗಳಿಂದ ಏನನ್ನು ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು ಎಂದು ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, RSSನವರಿಂದ ನಾವು ಕಲಿಬೇಕಾಗಿಲ್ಲ. ನಾವು ಟಿಪ್ಪು ಸುಲ್ತಾನ ಪರ ಎನ್ನುತ್ತಿದ್ದಾರೆ. ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರ ಪರ. ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು. ಇವರು ನಮಗೆ ಟಿಪ್ಪು ಸುಲ್ತಾನ್ ಫಾಲೋ ಮಾಡ್ತಿವೋ ಬಿಡ್ತಿವೋ ಅನ್ನೋದನ್ನ ಹೇಳೋದ ಬೇಡ ಎಂದು ತಿರುಗೇಟು ನೀಡಿದ್ದಾರೆ.

ಹಿಬಾಜ್ ವಿಷಯವಾಗಿ ಮಾತನಾಡಿದ ಅವರು, ಹಿಜಾಬ್ ಮತ್ತು ಬುರ್ಖಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಹಿಜಾಬ್ ಅನ್ನೋದು ತಲೆ ಮತ್ತೆ ಎದೆ ಮುಚ್ಚಿಕೊಳ್ಳೊಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಬುರ್ಖಾ ಅನ್ನೋದು ಸಂಪೂರ್ಣ ದೇಹ ಮುಚ್ಚಿಕೊಳ್ಳೋದು. ಶಾಲಾ ಕಂಪೌಂಡ್ ವರೆಗೂ ಭುರ್ಖಾ ಆ ನಂತರ ಹಿಜಾಬ್ ಇರಬೇಕು ಅನ್ನೋದು ನನ್ನ ಕಲ್ಪನೆ. ಭಾರತೀಯ ಜನತಾ ಪಾರ್ಟಿಯವರು ಸಮಾನತೆ ವಿಚಾರ ಮಾತಾಡ್ತಾರೆ ಎಂದರು.

ಬಿಜೆಪಿಗೆ ರೈತರು, ಮಹಿಳೆಯರ ಶೋಷಣೆ ಬಗ್ಗೆ ಕಾಳಜಿ ಇಲ್ಲ. ಅದಕ್ಕೆ ಅಹಾರ, ಉಡುಪಿನ ವಿಚಾರದ ಬಗ್ಗೆ ಮಾತಾಡ್ತೀದಾರೆ ಎಂದು ಆರೋಪಿಸಿದ್ದಾರೆ.

ನಮ್ದು ಜ್ಯಾತ್ಯಾತೀತ ರಾಷ್ಟ್ರ. ಎಲ್ಲ ಜಾತಿ ಧರ್ಮಗಳನ್ನು ಕಾಪಾಡಬೇಕು,ಕಾಂಗ್ರೆಸ್ ತುಷ್ಟೀಕರಣ ಮಾಡತಿಲ್ಲ. ಬಹು ಸಂಖ್ಯಾತರ ತುಷ್ಟೀಕರಣ ಮಾಡ್ತಿರೋದು ಬಿಜೆಪಿ. ಹಿಂಸೆ ಸುಳ್ಳನ್ನು ಪ್ರಚಾರ ಮಾಡ್ತಿರೋದು ಬಿಜೆಪಿ ಎಂದು ಹೇಳಿದ್ದಾರೆ.

More articles

Latest article