ಮುರುಡೇಶ್ವರದಲ್ಲಿ ಮುಳಬಾಗಿಲು ತಾಲೂಕಿನ ಮೂವರು ವಿದ್ಯಾರ್ಥಿನಿಯರು ನೀರುಪಾಲು; ಪ್ರಾಂಶುಪಾಲೆ ಅಮಾನತು

Most read

ಕೋಲಾರ: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿನಿಯರ ದೇಹಗಳ ಪತ್ತೆಗಾಗಿ ಶೋಧ ನಡೆದಿದೆ. ಓರ್ವ ವಿದ್ಯಾರ್ಥಿನಿ ಮೃತದೇಹ ಪತ್ತೆಯಾಗಿದೆ. ಮುಳಬಾಗಿಲಿನ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 46 ವಿದ್ಯಾರ್ಥಿಗಳು, 8 ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ಮುರುಡೇಶ್ವರಕ್ಕೆ ಆಗಮಿಸಿದ್ದರು. ಇವರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಶ್ರಾವಂತಿ ಅವರ ಮೃತದೇಹವನ್ನು ಹೊರತೆಗೆಯಲಾಗಿದೆ. ದೀಕ್ಷಾ, ಲಾವಣ್ಯ ಮತ್ತು ವಂದನ ಅವರ ಮೃತದೇಹಗಳಿಗೆ ಹುಡುಕಾಟ ನಡೆದಿದೆ. ಎಲ್ಲ ವಿದ್ಯಾರ್ಥಿನಿಯರು 9 ನೇ ತರಗತಿಯಲ್ಲಿ ಓದುತ್ತಿದ್ದರು.ನೀರಿಗೆ ಸಿಲುಕಿದ್ದ ಯಶೋಧ, ವೀಕ್ಷಣಾ, ಲಿಪಿಕಾ ಅವರನ್ನು ಮುರುಡೇಶ್ವರದ ಆರ್ ಎನ್ ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟವಾಡಲು ಇವರೆಲ್ಲರೂ ನೀರಿಗೆ ಇಳಿದಿದ್ದರು. ಇವರಲ್ಲಿ ಮೂವರು ನೀರಿನ ಅಲೆಗಳಿಗೆ ಕೊಚ್ಚಿ ಹೋಗಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಕೊತ್ತೂರು ವಸತಿ ಶಾಲೆ ಪ್ರಾಂಶುಪಾಲೆ ಶಶಿಕಲಾ ಹಾಗೂ ಅತಿಥಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತನಿಖೆಗೆ ಆದೇಶ ಹೊರಡಿಸಲಾಗಿದೆ. ಮೃತರ ಕುಟುಂಬಗಳಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ತಲಾ 5 ಲಕ್ಷ ರೂಗಳ ಪರಿಹಾರ ಘೋಷಿಸಲಾಗಿದೆ. ಶಾಸಕ ಮಂಜುನಾಥ್ ಮತ್ತು ಮೃತ ವಿದ್ಯಾರ್ಥಿನಿಯರ ಕುಟುಂಬದ ಸದಸ್ಯರು ಮುರುಡೇಶ್ವರಕ್ಕೆ ತೆರಳಿದ್ದಾರೆ.

More articles

Latest article