ಬೆಂಗಳೂರು: “ಕಾಯಕ” ಈ ಜಗತ್ತಿಗೆ ಜಗಜ್ಯೋತಿ ಬಸವಣ್ಣ ನೀಡಿದ ಉದಾತ್ತವಾದ ತತ್ವ. ಕಾಯಕದಿಂದಲೇ ಸಕಲವನ್ನೂ ಸಾಧಿಸಬಹುದು, ಬದುಕಿನ ಸಾರ್ಥಕತೆ ಕಾಣಬಹುದು, ಈ ಮಹತ್ವದ ಕಾಯಕ ತತ್ವವನ್ನು ಅರ್ಥಪೂರ್ಣವಾಗಿಸಲು ನಮ್ಮ ಸರ್ಕಾರವು “ಕಾಯಕ ಗ್ರಾಮ”ಎಂಬ ಮಹತ್ವದ ಕಾರ್ಯಕ್ರಮ ರೂಪಿಸಿದೆ. ಈ ಕುರಿತು ಬಜೆಟ್ ನಲ್ಲಿ ಘೋಷಣೆಯನ್ನೂ ಸಹ ಮಾಡಲಾಗಿತ್ತು.
ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಗ್ರಾಮಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲು, ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮಾಡಲು, ಅಭಿವೃದ್ಧಿಗೆ ವೇಗ ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ತಲಾ ಎರಡು ಗ್ರಾಮಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುವುದು ಕಾಯಕ ಗ್ರಾಮದ ಆಶಯ.
ರಾಜ್ಯದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಬದುಕನ್ನೂ ಸುಧಾರಿಸುವುದಕ್ಕಾಗಿ ಸರ್ಕಾರದ ಕಾರ್ಯಕ್ರಮಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಕೊರತೆ ಇಲ್ಲ, ಕೊರತೆ ಇರುವುದು ಅನುಷ್ಠಾನ ಮಾಡುವ ವ್ಯವಸ್ಥೆಯಲ್ಲಿ , ಅನುಷ್ಠಾನ ಮಾಡುವ ಅಧಿಕಾರಿಗಳಲ್ಲಿ ಇಚ್ಚಾಶಕ್ತಿ ಮತ್ತು ಪ್ರಮಾಣಿಕ ಪ್ರಯತ್ನವಿದ್ದರೆ ಸರ್ಕಾರದ ಕಾರ್ಯಕ್ರಮಗಳು ಜನತೆಗೆ ಅಕ್ಷರಶಃ ತಲುಪಿದ್ದೇ ಆದಲ್ಲಿ ಸಮೃದ್ಧ ಗ್ರಾಮಗಳನ್ನು ಕಾಣಬಹುದು.
ಅನುಷ್ಠಾನದಲ್ಲಿ ಆರೋಗ್ಯಯುತ ಸ್ಪರ್ಧೆಯನ್ನು ಏರ್ಪಡಿಸುವ ಮೂಲಕ ಅಧಿಕಾರಿಗಳಿಗೆ ಕಾರ್ಯಕ್ಷಮತೆಯನ್ನು ನಿರೂಪಿಸುವ ಹೊಣೆಗಾರಿಕೆಯನ್ನು ವಹಿಸಿದಾಗ ಅಭಿವೃದ್ಧಿಯಲ್ಲಿ ಗಾಂಭೀರ್ಯತೆ ಮತ್ತು ವೇಗ ಕಾಣಬಹುದು ಎಂಬ ವಿಶ್ವಾಸದೊಂದಿಗೆ ಕಾಯಕ ಗ್ರಾಮ ಕಾರ್ಯಕ್ರಮವನ್ನು ರೂಪಿಸಲಾಗಿದೆ.
– ತಮ್ಮ ಜಿಲ್ಲೆಯಲ್ಲಿನ ಅತ್ಯಂತ ಹಿಂದುಳಿದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು, ಆ ಗ್ರಾಮ ಪಂಚಾಯಿತಿಗಳ ಕಾರ್ಯಕ್ಷಮತೆಯನ್ನು ಪರಿಣಾಮಕಾರಿಯಾಗಿಸಲು ಕ್ರಮವಹಿಸುವುದು.
– ಆಯ್ಕೆ ಮಾಡಿಕೊಂಡ ಗ್ರಾಮಗಳ ಪ್ರಸ್ತುತ ವಾಸ್ತವ ಸ್ಥಿತಿಗಳನ್ನು ದಾಖಲಿಸಿ ಪಂಚತಂತ್ರ ತಂತ್ರಾಂಶದಲ್ಲಿ ಮಾಡ್ಯೂಲ್ ಸಿದ್ದಪಡಿಸಬೇಕು.
– ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ದಪಡಿಸಿ, ಅನುಷ್ಠಾನ ಮಾಡಬೇಕು. ಗ್ರಾಮ ಸಭೆಗಳನ್ನು ಆಯೋಜಿಸಬೇಕು, ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಲು ಕ್ರಮ ವಹಿಸಬೇಕು.
– ಸರ್ಕಾರದ ಯೋಜನೆಗಳನ್ನು ಸಮರ್ಥ ಅನುಷ್ಠಾನ ಮತ್ತು ನಿರಂತರ ಪ್ರಗತಿ ಪರಿಶೀಲನೆ ನಡೆಸಿ ಪ್ರಗತಿಯನ್ನು ಖಾತರಿಪಡಿಸಿಕೊಳ್ಳುವುದು.
ಒಬ್ಬ ಅಧಿಕಾರಿ ಹಿಂದುಳಿದ ಗ್ರಾಮ ಪಂಚಾಯಿತಿಗಳ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಆದ್ಯತೆಯನ್ನು ನೀಡಿದಾಗ ಆ ಪಂಚಾಯಿತಿಯ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ವೇಗ ದೊರಯಲಿದೆ ಮತ್ತು ಪಂಚಾಯಿತಿ ಮಟ್ಟದ ಆಡಳಿತದಲ್ಲಿ ಸುಧಾರಣೆ ಕಾಣಲಿದೆ.
ಗ್ರಾಮೀಣಾಭಿವೃದ್ಧಿಯಲ್ಲಿ ಇದೊಂದು ಮೈಲಿಗಲ್ಲಿನಂತಹ ಕಾರ್ಯಕ್ರಮವಾಗಲಿದೆ ಎಂದು ನಂಬಿದ್ದೇನೆ. ಕಾಯಕ ಗ್ರಾಮಗಳನ್ನು ದತ್ತು ಪಡೆದ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ತಮ್ಮ “ಕಾಯಕ”ವನ್ನು ನಿರ್ವಹಿಸಿ, ಹಿಂದುಳಿದ ಗ್ರಾಮ ಪಂಚಾಯಿತಿಗಳ ಸೂಚ್ಯಾಂಕಗಳಲ್ಲಿ ಸುಧಾರಣೆ ತಂದಾಗ ಅಭಿವೃದ್ಧಿಯ ಹಾದಿಯಲ್ಲಿ ವೇಗ ಸಾಧಿಸಲು ಸಾಧ್ಯವಾಗುತ್ತದೆ.
ಧರ್ಮಸ್ಥಳ: ಎಸ್ ಐಟಿ ತನಿಖೆಗೆ ಮಧ್ಯಂತರ ತಡೆ; ಆದರೆ ನಾಪತ್ತೆ, ಯುಡಿಆರ್ ಕುರಿತು ತನಿಖೆ ಮುಂದುವರಿಕೆ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಮೃತ ದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲಾಗಿದೆ ಎಂಬ ಆರೋಪಗಳನ್ನು ಕುರಿತು ಎಸ್ಐಟಿ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಲ್ಲಿ ಸಂಭವಿಸಿರುವ ಅಸ್ವಾಭಾವಿಕ ಸಾವುಗಳ (ಯುಡಿಆರ್) ಕುರಿತಾದ ಮತ್ತು ನಾಪತ್ತೆಯಾದವರನ್ನು ಕುರಿತು ತನಿಖೆ ಮುಂದುವರೆಯಲಿದೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ನಮ್ಮ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಬೆಳ್ತಂಗಡಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಡೆ ನೀಡಿ ಆದೇಶಿಸಿದೆ.
ಈ ಮಧ್ಯೆ ಎಸ್ ಐಟಿಯು ವಿಚಾರಣೆಗೆ ಹಾಜರಾಗುವಂತೆ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಅವರಿಗೆ ನೋಟಿಸ್ ನೀಡಿದೆ.
ಹೈಕೋರ್ಟ್ ವಿಚಾರಣೆಗೆ ವಿಡಿಯೋ ಮುಖಾಂತರ ಹಾಜರಾದ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ಬಾಲಕೃಷ್ಣನ್ ಹಾಗೂ ದೀಪಕ್ ಖೋಸ್ಲಾ, ಅವರು ವಾದಿಸಿ ಅರ್ಜಿದಾರರಿಗೆ ಈಗಾಗಲೇ 9 ಬಾರಿ ಪೊಲೀಸ್ ನೋಟಿಸ್ ಜಾರಿಗೊಳಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ. ಎಸ್‌ಐಟಿಯ ಮುಖ್ಯ ತನಿಖಾಧಿಕಾರಿಯು ಇದೇ ತಿಂಗಳ 24ರಂದು ವಾಟ್ಸ್ ಆ್ಯಪ್ ಮೂಲಕ ಅರ್ಜಿದಾರರಿಗೆ ಬಿಎನ್‌ಎಸ್ಎಸ್ ಕಲಂ 35(3) ಅಡಿಯಲ್ಲಿ ಮತ್ತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ 211 (ಎ) ಅಡಿ ಎಫ್‌ಐಆರ್ ದಾಖಲಿಸಿ ನಂತರ ಬೇರೆ ಕಲಂಗಳ ಅಡಿಯಲ್ಲೂ ವಿಚಾರಣೆ ಮಾಡುತ್ತಿದ್ದಾರೆ. ಆದ್ದರಿಂದ ಹೊಸದಾಗಿ ನೀಡಿರುವ ನೋಟಿಸ್ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದಾಗ ನ್ಯಾಯಮೂರ್ತಿಗಳು ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಪ್ರಾಸಿಕ್ಯೂಷನ್ ಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದರು.

 
                                    