ಕೋಲಾರ: ಮನೆ ಕೆಲಸ ಮುಗಿಸಿ ತನ್ನ ಮನೆಯತ್ತ ಹೊರಟಿದ್ದ ಮಹಿಳೆಯೊಬ್ಬಳನ್ನು ಪ್ರಜ್ಞೆ ತಪ್ಪಿಸಿ, ಆಕೆಯ ಕತ್ತಿನಲ್ಲಿದ್ದ 20 ಗ್ರಾಂ ಮಾಂಗಲ್ಯ ಸರ ಹಾಗೂ ಐದು ಗ್ರಾಂ ಬೆಂಡೋಲೆ ಹಾಗೂ 6,000 ನಗದು ತೆಗೆದುಕೊಂಡು ಕ್ಷಣಮಾತ್ರದಲ್ಲಿ ನಾಪತ್ತೆಯಾಗಿದ್ದಾರೆ.
ಬೆಳಗ್ಗೆ ಸುಮಾರು 10:30 ರಲ್ಲಿ ನಗರದ ಬಸ್ ನಿಲ್ದಾಣಕ್ಕೆ ಸಮೀಪದ ಅಂಚೆ ಕಚೇರಿ ರಸ್ತೆಯಲ್ಲಿ ಈ ಘಟನೆ ನಡೆದಿದೆ
ನಗರದ ಕೀಲುಕೋಟೆ ಮಂಗಮ್ಮ ( 58 ) ಎಂಬಾಕೆಯು ಎಂದಿನಂತೆ ಮನೆಗಳ ಕೆಲಸಗಳನ್ನು ಮುಗಿಸಿಕೊಂಡು ಎರಡು ಮನೆಯವರು ನೀಡಿದ ತಿಂಗಳ ಸಂಬಳ ರೂ 6000 ಹಣ ನಗದು ಪಡೆದುಕೊಂಡು ಮನೆ ಹೊರಟಿದ್ದ ಸಮಯದಲ್ಲಿ ಇಬ್ಬರು ಇಬ್ಬರು ವ್ಯಕ್ತಿಗಳು ಆಕೆಯ ಬಳಿ ಬಂದು ನಮ್ಮ ಬಳಿ ಒಡವೆ ಇದು ಅದನ್ನು ಗಿರವಿ ಇಡಲು ಅಂಗಡಿ ತೋರಿಸುವಂತೆ ಕೇಳುತ್ತಾ ಮಾತು ಬೆಳೆಸಿ ಆಕೆ ಕೈಗೆ ಕರಿಮಣಿ ಸರಗಳುಳ್ಳ ಕರ್ಚೀಫ್ ನೀಡಿದ್ದು ತಕ್ಷಣವೇ, ಪ್ರಜ್ಞ ಹೀನಳಾಗಿ ಕುಳಿತುಕೊಳ್ಳುತ್ತಿದ್ದಂತೆ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಬೆಂಡೋಲೆ ಸೇರಿದಂತೆ ಆಕೆ ಬಳಿ ಇದ್ದ ನಗದು ಹಣವನ್ನು ತೆಗೆದು ಕೊಂಡು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ. ಹಾಡಾಗಲಿನಲ್ಲಿ ಅದು ಜನಸಂದಣಿ ಇರುವ ರಸ್ತೆಯಲ್ಲಿ ಈ ಘಟನೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಸಬ್ ಇನ್ಸ್ಪೆಕ್ಟರ್ ಹೊನ್ನೇಗೌಡ ಸ್ಥಳಕ್ಕೆ ಧಾವಿಸಿ ಆಕೆಯನ್ನು ನಗರ ಠಾಣೆಗೆ ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

