ಪ್ರೀತಿ ಮನೆಯಲ್ಲಿ ಗೊತ್ತಾಗಿದೆ.. ಇಬ್ಬರು ಸಾಯೋಣಾ ಅಂತ ವಿಷ ಕೊಟ್ಟು ಖಳ ನಟ ಮೈಸೂರು ಲೋಕೇಶ್ ಮಾತ್ರ ಕುಡಿಯುವಂತೆ ಮಾಡಿದರ ಆ ಹೆಂಗಸು..?
ಆಗಿನ ಕಾಲದ ಖಳ ನಾಯಕರು ತೆರೆ ಮೇಲೆ ಬಂದರು ಎಂದರೆ ಜನರಿಂದ ಹಿಡಿ ಶಾಪ ಹಾಕಿಸಿಕೊಳ್ಳುವುದಕ್ಕೆ ರೆಡಿಯಾಗಿದ್ದರು. ವಜ್ರಮುನಿ, ಸುಧೀರ್, ಮೈಸೂರು ಲೋಕೇಶ್ ಹೀಗೆ ಹಲವರು ನಿಜ ಜೀವನದಲ್ಲಿ ಬಹಳ ಒಳ್ಳೆಯವರು. ಆದರೆ ತೆರೆಯ ಮೇಲೆ ಅಷ್ಟು ಕ್ರೌರ್ಯತೆ ಬರಬೇಕು ಎಂಬ ಕಾರಣಕ್ಕೇನೆ ಸಾಕಷ್ಟು ಶ್ರಮ ಹಾಕುತ್ತಿದ್ದರು. ಮೈಸೂರು ಲೋಕೇಶ್ ಖಳ ನಾಯಕನ ಜೊತೆಗೆ ಹಾಸ್ಯ ಪಾತ್ರದಲ್ಲೂ ಮಿಂಚಿದವರು. ಆದರೆ ಇದೀಗ ಅವರ ಸಾವಿನ ಬಗ್ಗೆ ಮಗ ಆದಿ ಲೋಕೇಶ್ ಬೇಸರ ಮಾಡಿಕೊಂಡು ಆ ನೋವು ಹಂಚಿಕೊಂಡಿದ್ದಾರೆ.
ಮೈಸೂರು ಲೋಕೇಶ್ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೃತ್ತಿ ಜೀವನದಲ್ಲಿ ಚೆನ್ನಾಗಿದ್ದಾಗಲೇ ಮೈಸೂರು ಲೋಕೇಶ್ ಗೆ ಸರ್ವಮಂಗಳ ಮೇಲೆ ಪ್ರೀತಿಯಾಗುತ್ತೆ. ಸರ್ವಮಂಗಳ ಅದಾಗಲೇ ಡಿಂಗ್ರಿ ನಾಗರಾಜ್ ಅವರ ಧರ್ಮಪತ್ನಿಯಾಗಿದ್ದರು. ಆದರೆ ಇಬ್ಬರ ಪ್ರೀತಿ ಎರಡು ಮನೆಯವರಿಗೆ ಗೊತ್ತಾದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾರೆ. ಇಬ್ಬರ ದುರಂತ ಅಂತ್ಯದ ಬಗ್ಗೆ ಸಿಬಿಐ ಮುಂದೆ ನೀಡಿದ ಹೇಳಿಕೆ ಈ ಎಲ್ಲದರ ಬಗ್ಗೆಯೂ ಆದಿ ಲೋಕೇಶ್ ಮಾತನಾಡಿದ್ದಾರೆ.
‘ಬೆಳಗ್ಗೆ ಶೂಟಿಂಗ್ ರಾತ್ರಿಯೆಲ್ಲಾ ನಾಟಕ ಮಾಡ್ತಾ ಇದ್ದರು ಆಗ. ಆ ಸಮಯದಲ್ಲಿ ಇಬ್ಬರಿಗೂ ಪ್ರೀತಿ ಆಗಿತ್ತು. ಅದು ನಮ್ಮ ಅಮ್ಮನಿಗೆ ಹಾಗೂ ಆ ಕಡೆಯವರಿಗೆ ಗೊತ್ತಾಗಿತ್ತು. ನಮ್ಮ ಅಮ್ಮ ಬೌಂಡರಿ ಹಾಕಿದರು. ಒಂದು ದಿನ ತಂದೆಗೆ ಫೋನ್ ಬರುತ್ತೆ. ಎರಡು ಮನೆಯವರಿಗೂ ಗೊತ್ತಾಗಿದೆ. ಸತ್ತೋಗಿ ಬಿಡೋಣಾ ಅಂತಾರೆ. ಅದು ಅವರ ಪ್ಲ್ಯಾನ್ ಆಗಿತ್ತು. ನಮ್ಮ ತಂದೆಯವರ ಪ್ಲ್ಯಾನ್ ಆಗಿರಲಿಲ್ಲ. ಬಲವಂತವಾಗಿ ವಿಷ ಕುಡಿಯುವ ನಿರ್ಧಾರವಾಗುತ್ತೆ. ನಮ್ಮ ತಂದೆ ಕುಡಿಯುತ್ತಾರೆ ಆದರೆ ಅವರು ಕುಡಿಯಲ್ಲ. ಎದೆ ಮೇಲೆ ಸುರಿದುಕೊಳ್ಳುತ್ತಾರೆ. ಬದುಕಿಸು ಎಂದು ನಮ್ಮ ತಂದೆ ಕೇಳಿಕೊಂಡರು ಬದುಕಿಸಲಿಲ್ಲ. ಎರಡು ದಿನ ಹೊಟೇಲ್ ನಲ್ಲಿಯೇ ಇರಿಸಿಕೊಂಡಿದ್ದರು. ಆದರೆ ನಮ್ಮ ತಂದೆಯನ್ನು ಆಸ್ಪತ್ರೆಗೆ ಸೇರಿಸಿದರು ಬದುಕುಳಿಯಲಿಲ್ಲ ಎಂದಿದ್ದಾರೆ.