ಸತ್ಯ ನ್ಯಾಯ ನಿಷ್ಠುರ ಸುದ್ದಿ ಪ್ರಸಾರಕ್ಕೆ ಹೆಸರಾದ ʼದಿ ವೈರ್‌ʼ ಗೆ ನಿಷೇಧ; ಕೇಂದ್ರ ಸರ್ಕಾರದ ಕ್ರಮಕ್ಕೆ ವ್ಯಾಪಕ ಟೀಕೆ

Most read

ಬೆಂಗಳೂರು: ದಿ ವೈರ್‌ ಡಿಜಿಟಲ್‌ ಸುದ್ದಿ ಮಾಧ್ಯಮವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಸಂವಿಧಾನ ನೀಡಿರುವ ಮಾಧ್ಯಮ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ದೇಶಾದ್ಯಂತ ದಿ ವೈರ್‌ ಮಾಧ್ಯಮವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಐಟಿ ಕಾಯಿದೆ-2000 ದ ಪ್ರಕಾರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ ದಿ ವೈರ್‌ ಅನ್ನು ಬ್ಲಾಕ್‌ ಮಾಡಲಾಗಿದೆ ಎಂದು ಇಂಟರ್‌ ನೆಟ್‌ ಸೇವಾ ಪೂರೈಕೆದಾರರು ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ಉಗ್ರವಾಗಿ ಖಂಡಿಸುತ್ತೇವೆ. ಮಾಧ್ಯಮದ ಪ್ರಮುಖ ಆಸ್ತಿಯಾದ ಸತ್ಯ, ನ್ಯಾಯ ನಿಷ್ಠುರವನ್ನು ಬಿತ್ತರಿಸುವ ಮಾಧ್ಯಮಗಳ ತುರ್ತು ಅವಶ್ಯಕತೆ ಇರುವ ಸಂದರ್ಭದಲ್ಲಿ ಸರ್ಕಾರದ ಈ ಕ್ರಮ ಖಂಡನೀಯ. ಸರ್ಕಾರದ ಈ ಅನಪೇಕ್ಷಿತ ನಡೆಯನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸುತ್ತೇವೆ. ನಮ್ಮ ಓದುಗರಿಗೆ ಸತ್ಯ, ನಿಖರ ಸುದ್ದಿಯನ್ನು ನೀಡುವ ಪ್ರಯತ್ನದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ದಿ ವೈರ್‌ ಮಾಧ್ಯಮ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

More articles

Latest article