ಸಾಹಿತ್ಯದಲ್ಲಿ ಎಐ ಬಳಕೆ ಅಪಾಯಕಾರಿ : ಓ.ಎಲ್. ನಾಗಭೂಷಣ ಸ್ವಾಮಿ 

ಬೆಂಗಳೂರು  :  ಸಾಹಿತ್ಯದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯಿಂದ ಸಾಕಷ್ಟು ಅಪಾಯಗಳು ಎದುರಾಗುತ್ತವೆ. ಮನುಷ್ಯನ ಸೃಜನಶೀಲ ಚಿಂತನೆಗೆ ಎಐ ತಂತ್ರಜ್ಞಾನ  ಮಾರಕವಾಗಲಿದೆ ಎಂದು ಖ್ಯಾತ ವಿಮರ್ಶಕ, ಲೇಖಕ ಡಾ.ಓ ಎಲ್ ನಾಗಭೂಷಣ ಸ್ವಾಮಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಜ್ಞಾನಭಾರತಿಯಲ್ಲಿರುವ ಜಿ ಎಸ್ ಎಸ್ ಸಭಾಂಗಣದಲ್ಲಿ ರಾಷ್ಟ್ರಕವಿ ಡಾ.ಜಿ ಎಸ್ ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದಲ್ಲಿ ಜಿ ಎಸ್ ಶಿವರುದ್ರಪ್ಪ ಅವರ ಕಾವ್ಯಾರ್ಥ ಚಿಂತನ ಕೃತಿಯನ್ನು ಕುರಿತು ಮಾತನಾಡಿದರು.

ಕಾವ್ಯ ಮೀಮಾಂಸೆ ಹಾಗೂ ವಿಮರ್ಶೆಯ ಪರಿಭಾಷೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ ನಾವು ಇಂದಿಗೂ ಪಾಶ್ಚಾತ್ಯ ವಿಮರ್ಶೆಯ ಮಾದರಿಗಳನ್ನು ಇಟ್ಟುಕೊಂಡೆ ಸಾಹಿತ್ಯ ಕೃತಿಯೊಂದರ ತೌಲಾನಿಕ ಅಧ್ಯಯನ ಮಾಡುತ್ತೇವೆ ಆದರೆ ಆಧುನಿಕ ಕಾಲಘಟ್ಟದಲ್ಲಿ ಇಂದಿನ ಮಾದರಿಗಳು ಬೇರೆಯದೆ ಆಗಿದೆ ಎಂದು  ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಮಾದರಿಯನ್ನು ಹಾಕಿಕೊಟ್ಟದ್ದು ಕುವೆಂಪು ಅವರು, ಕುವೆಂಪು ವಿಮರ್ಶೆಯ ಪರಿಭಾಷೆ ಸಿದ್ಧಾಂತ ಪರಿಕಲ್ಪನೆಗಳ ಬಗ್ಗೆ ಒಂದು ಸಿದ್ದ ಮಾದರಿಯನ್ನು ತೋರಿಸಿಕೊಟ್ಟರು ಆದರೆ ಅವು ಪಾಶ್ಚಾತ್ಯ ವಿಮರ್ಶೆಯ ದಟ್ಟ ಪ್ರಭಾವದಲ್ಲಿ ದ್ದವು, ಆ ದಾರಿಯಲ್ಲಿ ಮುಂದುವರೆದು ಕನ್ನಡದ ವಿಮರ್ಶೆಯೇ ಮತ್ತು ಪೌರಾಣಿಕತೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು ಜಿ ಎಸ್ ಶಿವರುದ್ರಪ್ಪ ಅವರು, ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೌಲಾನಿಕ ಅಧ್ಯಯನದ ಒಂದು ವಿಭಾಗವನ್ನೇ ಆರಂಭಿಸಿದರು ಅದರ ಸಂಪೂರ್ಣ ಶ್ರೇಯ ಜಿಎಸ್ಎಸ್ ಅವರಿಗೆ ಸಲ್ಲುತ್ತದೆ ಎಂದು ಓ.ಎಲ್ ನಾಗಭೂಷಣ ಸ್ವಾಮಿ ಹೇಳಿದರು.

ಕಾವ್ಯಮೀಮಾಂಸೆ ಯಾಕೆ ಓದಬೇಕು ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಹಾಕಿಕೊಳ್ಳಬೇಕು ಬರೆಯುವವರು ಅದಕ್ಕೆ ತಮಗೆ ತಾವೇ ಉತ್ತರವನ್ನು ಕಂಡುಕೊಳ್ಳಬೇಕು ಆಗ ಮಾತ್ರ ಅವರ ಸಾಹಿತ್ಯ ವಿಮರ್ಶೆಯ ಪರಿಭಾಷೆಯ ಒಳಗೆ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಅವರು ತಿಳಿಸಿದರು. ಒಂದು ಸಾಹಿತ್ಯ ಕೃತಿಯ ಅರ್ಥ ನಿರ್ಣಯಿಸುವವರು ಯಾರು ಓದುಗರೆ, ವಿಮರ್ಶಕರೇ , ಅಥವಾ ಬರಹಗಾರನೇ ಎಂಬ ಪ್ರಶ್ನೆ ಅಂದಿಗೂ ಇತ್ತು ,ಇಂದಿಗೂ ಇದೆ, ಮುಂದೆಯೂ ಇರುತ್ತದೆ ಎಂದು ಅವರು ತಿಳಿಸಿದರು.

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ  ಮಾನಸ ಮಾತನಾಡಿ,  ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಅವರ ಸಾಹಿತ್ಯದ ಸಾಧನೆ ಬಣ್ಣಿಸುವುದು ಅತ್ಯಂತ ಕಷ್ಟದ ಕೆಲಸ. ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಪ್ರಾಧಿಕಾರ ಈ ಕಾರ್ಯಕ್ರಮ ಆಯೋಜಿಸಿದೆ, ವಿದ್ಯಾರ್ಥಿಗಳು ಪ್ರಾಧಿಕಾರದ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಾಹಿತ್ಯ ಜೀವನ ವಿಧಾನವನ್ನು ರೂಪಿಸುತ್ತದೆ ಬದುಕುವುದನ್ನು ಕಲಿಸುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಸಾಹಿತ್ಯದ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಎಂದರು. 

ಸಮಾರಂಭದಲ್ಲಿ ಪ್ರಾಧಿಕಾರದ ಆಡಳಿತ ಅಧಿಕಾರಿ ಕೆ ಬಿ ಕಿರಣ್ ಸಿಂಗ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು .ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಡೊಮಿನಿಕ್ ಡಾ.ಮುನಿಯಪ್ಪ ಹಾಗೂ ಡಾ. ವಡ್ಡೆ ಹೇಮಲತಾ ಉಪಸ್ಥಿತರಿದ್ದರು.

More articles

Latest article

Most read