ಛತ್ರಪತಿ ಶಿವಾಜಿಯ ನೈಜ ಇತಿಹಾಸ ಮತ್ತು ತುಳು ನಾಟಕ

ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಮೊಘಲರ ಸಂಪೂರ್ಣ ಇತಿಹಾಸವನ್ನೇ ತೆಗೆದು ಹಾಕಿರುವಾಗ ಕೇವಲ ನಮ್ಮ ಕರಾವಳಿಗೆ ಮೀಸಲಾಗಿರುವ ತುಳು ಭಾಷೆಯ ನಾಟಕದಲ್ಲಿ ಶಿವಾಜಿಯ ಇತಿಹಾಸ ತಿರುಚಿರುವುದು ಆಶ್ಚರ್ಯವಲ್ಲ ಬಿಡಿ. ಮುಂಬಯಿಯ ಇತಿಹಾಸ ತಜ್ಞ ಪ್ರೊ.ರಾಮ್ ಪುಣಿಯಾಣಿ ಮತ್ತು ದಿಲ್ಲಿಯ ಇತಿಹಾಸ ತಜ್ಞೆ ರುಚಿಕಾ ಶರ್ಮ ಇವರನ್ನು ಮಂಗಳೂರಿಗೆ ಕರೆಸಿ ಶಿವಾಜಿಯ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿ ತುಳುವರಿಗೆ ಹೇಳುವ ಅಗತ್ಯವಿದೆ – ಪ್ರವೀಣ್ ಎಸ್‌ ಶೆಟ್ಟಿ‌, ಹಿರಿಯ ಲೇಖಕರು.

ತುಳು ಭಾಷೆಯಲ್ಲಿ ಛತ್ರಪತಿ ಶಿವಾಜಿ ಎಂಬ ತುಳು ನಾಟಕದ ಜಾಹೀರಾತು ನಾನು ತುಂಬಾ ಸಮಯದಿಂದ ನೋಡುತ್ತಿದ್ದೆ. ಕೋಮುದ್ವೇಷವನ್ನೇ ಉಂಡು-ಉಟ್ಟು-ಹೊದ್ದು ಮಲಗಿರುವ ನಮ್ಮ ಮಂಗಳೂರಿನಲ್ಲಿ ಈ ಐತಿಹಾಸಿಕ ನಾಟಕ ತುಳು ಭಾಷೆಯಲ್ಲಿ ಹೇಗೆ ಮೂಡಿ ಬಂದಿರಬಹುದು ಎಂಬ ಕುತೂಹಲದಿಂದ ಕಳೆದ ತಿಂಗಳು ಜನವರಿ 18 ರಂದು ಮಂಗಳೂರಿನ ಟಿ‌ ಎಂ ಎ ಪೈ ಅಡಿಟೋರಿಯಂ ನಲ್ಲಿ ಛತ್ರಪತಿ ಶಿವಾಜಿ ನಾಟಕ ನೋಡಲು ಹೋಗಿದ್ದೆ. ಇದು ವಿಜಯಕುಮಾರ್ ಕೊಡಿಯಾಲಬೈಲ್ ಇವರ ನಿರ್ದೇಶನದ ತುಳು-ಕನ್ನಡ ನಾಟಕ ಆದುದರಿಂದ ಇದರಲ್ಲಿ ಆ ಕಾಲದ ಕರ್ನಾಟಕದ ಚರಿತ್ರೆ ಮತ್ತು ಶಿವಾಜಿಯ ಜೀವನಕ್ಕೆ ಸಂಬಂಧ ಪಟ್ಟ ಕಥೆಯೇನಾದರೂ ಇರಬಹುದೇನೋ ಎಂಬ ಕುತೂಹಲ ನನಗಿತ್ತು. 

ಯಕ್ಷಗಾನ ಶೈಲಿಯ ಅಬ್ಬರದ ಸಂಗೀತದಿಂದ ಶುರುವಾಗಿ ಎರಡೂವರೆ ಗಂಟೆಗಳ ಕಾಲ ನಡೆದ ಈ ನಾಟಕದಲ್ಲಿ ಶಿವಾಜಿಯನ್ನು ಸೋಲಿಸಿದ ಕನ್ನಡ ರಾಣಿ ಬೆಳವಾಡಿ ಮಲ್ಲಮ್ಮಳ ಕುರಿತು ಯಾವುದೇ ದೃಶ್ಯ ಇರಲಿಲ್ಲ.  ಅದಕ್ಕಿಂತ ಹೆಚ್ಚಾಗಿ ಶಿವಾಜಿ ಶೃಂಗೇರಿ ಮಠವನ್ನು ಹಾಗೂ ಉಡುಪಿ ಜಿಲ್ಲೆಯ ಬಸರೂರಿನ ಮಹಾಲಿಂಗೇಶ್ವರ ದೇವಸ್ಥಾನವನ್ನು ಲೂಟಿ ಮಾಡಿದ ಕುರಿತು ಏನಾದರೂ ಸಮರ್ಥನೆ ಅಥವಾ ಕಾರವಾರದ ಹತ್ತಿರದ ಆಗಿನ ಬಂದರು ಮತ್ತು ದೊಡ್ಡ ವಿದೇಶ ವ್ಯಾಪಾರಿ ಪಟ್ಟಣ ಅಂಕೋಲ ಹಾಗೂ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ವಾಣಿಜ್ಯ ಪಟ್ಟಣವನ್ನು ಶಿವಾಜಿ ಲೂಟಿ ಹೊಡೆದು ಅಲ್ಲಿಯ ಸಾವಿರಾರು ಲಿಂಗಾಯತ ಮತ್ತು ಕನ್ನಡ ಜೈನ ವ್ಯಾಪಾರಿಗಳ ಮಾರಣಹೋಮ ನಡೆಸಿರುವ ಕುರಿತು ಒಂದಿಷ್ಟು ಉಲ್ಲೇಖ ಇರದಿರುವುದು ನನಗೆ ಆಶ್ಚರ್ಯ ತರಿಸಲಿಲ್ಲ.

ಶಿವಾಜಿಯ ಹಿಂದೂ ರಕ್ಷಕ ವ್ಯಕ್ತಿತ್ವಕ್ಕೆ  ಧಕ್ಕೆ ತರುವ ಇಂತಹಾ ಐತಿಹಾಸಿಕ ಘಟನೆಗಳನ್ನು ತೆರೆಮರೆಗೆ ಸರಿಸಿರುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ.  ಧಾರ್ಮಿಕ ಸೌಹಾರ್ದ ಸಾರುವ ಒಂದೇ ಒಂದು ಐತಿಹಾಸಿಕ ವಿಷಯವನ್ನೂ ಈಗಿನ ಸರಕಾರ ಮತ್ತು ಆಳುವ ಪಕ್ಷ  ಸಹಿಸುವುದಿಲ್ಲ ಎಂದು ಗೊತ್ತಿದ್ದ ನಾಟಕಕಾರ ಅಂತಹಾ ದೃಶ್ಯಗಳನ್ನು ಸೇರಿಸುವ ಧೈರ್ಯ ಮಾಡದಿರುವುದೂ ನನಗೆ ಆಶ್ಚರ್ಯ ತರಲಿಲ್ಲ.  ಕೇವಲ ಒಂದು ದೃಶ್ಯದಲ್ಲಿ ಶಿವಾಜಿಯ ಸೈನಿಕರು ಒಬ್ಬ ಮುಸ್ಲಿಂ ಯುವತಿಯನ್ನು ಬಂಧಿಸಿ ತಂದು ಶಿವಾಜಿ ಎದುರು ನಿಲ್ಲಿಸುತ್ತಾರೆ. ಆಗ ಶಿವಾಜಿ ತನ್ನ ಸೈನಿಕರನ್ನು ಗದರಿಸಿ, ಎಲ್ಲ ಧರ್ಮದ ಮಹಿಳೆಯರನ್ನು ಗೌರವಿಸಬೇಕು ಹಾಗೂ ಈ ಯುವತಿ ತನ್ನ ಸಹೋದರಿ ಇದ್ದಂತೆ, ಹಾಗಾಗಿ ಅವಳನ್ನು ಸುರಕ್ಷಿತವಾಗಿ ಅವಳ ಕುಟುಂಬದ ಊರಲ್ಲಿ ಬಿಟ್ಟು ಬರಬೇಕು ಎಂದು ತನ್ನ ಸೈನಿಕರಿಗೆ ಆದೇಶಿಸುವ ಒಂದೇ ಒಂದು ದೃಶ್ಯ ಮಾತ್ರ ಕೋಮು ಸೌಹಾರ್ದಕ್ಕೆ ಒತ್ತು ಕೊಡುವ ದೃಶ್ಯ ಆಗಿತ್ತು.  

ಆದರೆ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿರುವ ಅಫಜಲ್ ಖಾನನ ಹತ್ಯೆಯ ರೋಚಕ ಘಟನೆಯನ್ನು ಈ ನಾಟಕದಲ್ಲಿ ಸರಿಯಾಗಿ ತೋರಿಸಿಲ್ಲ. ಶಿವಾಜಿಯ 18 ಅಂಗರಕ್ಷಕರಲ್ಲಿ 12 ಅಂಗರಕ್ಷಕರು ಮುಸ್ಲಿಮರಾಗಿದ್ದರಂತೆ. ಇದು ಶಿವಾಜಿ ಮುಸ್ಲಿಮರನ್ನು ಎಷ್ಟು ನಂಬುತ್ತಿದ್ದ ಎಂಬುದನ್ನೂ ಸೂಚಿಸುತ್ತದೆ. ಶಿವಾಜಿಗೆ ಲೋಹದ ಹುಲಿ ಉಗುರು (ವಾಘ್ ನಖ್) ಬಳಸಿ ಅಫ್ಜಲ್ ಖಾನನನ್ನು ಕೊಲ್ಲುವ ಉಪಾಯ ಹೇಳಿ ಕೊಟ್ಟವನು ಶಿವಾಜಿಯ ಮುಸ್ಲಿಂ ಅಂಗರಕ್ಷಕ ರುಸ್ತುಮೇ ಜಮಾನ್ ಎಂಬ ರೋಚಕ ಸತ್ಯವನ್ನು ಈ ನಾಟಕದಲ್ಲಿ ಸೇರಿಸಿಲ್ಲ. ಶಿವಾಜಿ ತಾನೇ ಸ್ವತಃ ಹುಲಿ ಉಗುರಿನ ಉಪಾಯ ಯೋಜಿಸಿದ್ದು ಎನ್ನುವಂತೆ ನಾಟಕದಲ್ಲಿ ತೋರಿಸಲಾಗಿದೆ. ಅಷ್ಟೇ ಅಲ್ಲ ಮೂಲ ಚರಿತ್ರೆಯಲ್ಲಿ ಅಫಜಲ್ ಖಾನ್ ಸತ್ತ ಮೇಲೆ ಅವನ  ಸಚಿವನಾದ ಬ್ರಾಹ್ಮಣ ಕೃಷ್ಣಾಜಿ  ಭಾಸ್ಕರ್ ಕುಲಕರಣಿ ಎಂಬವನು ಶಿವಾಜಿಯ ಮೇಲೆ ದಾಳಿ ಮಾಡುತ್ತಾನೆ. ಆಗ ಶಿವಾಜಿ ಅವನನ್ನೂ ಕೊಲ್ಲುತ್ತಾನೆ. ಆದರೆ ಈ ನಾಟಕದಲ್ಲಿ  ಅಫಜಲ್ ಖಾನ್ ಸತ್ತ ಮೇಲೆ ಕೃಷ್ಣಾಜಿ ಭಾಸ್ಕರ ಮತ್ತು ಅಫಜಲ್ ಖಾನನ  ಇನ್ನೊಬ್ಬ ಮುಸ್ಲಿಂ ಅಂಗರಕ್ಷಕ ಅಲ್ಲಿಂದ ಓಡಿ ಹೋಗುವ ದೃಶ್ಯ ಮಾತ್ರ ತೋರಿಸಲಾಗಿದೆ. (ಮೂಲ ಮರಾಠಾ ಇತಿಹಾಸದಲ್ಲಿ ಕೃಷ್ಣಾಜಿ ಕುಲಕರಣಿ ಈತ ವೈರಿ ಮುಸ್ಲಿಂ ರಾಜ್ಯದವನಾದರೂ ಅವನು ಬ್ರಾಹ್ಮಣನಾದುದರಿಂದ  ಅವನನ್ನು ಶಿವಾಜಿ ಕೊಂದಿದ್ದಕ್ಕೆ ಶಿವಾಜಿಯ ಬ್ರಾಹ್ಮಣ ಮಂತ್ರಿಗಳು ಶಿವಾಜಿಯನ್ನು ಖಂಡಿಸುತ್ತಾರೆ ಹಾಗೂ ಪ್ರಾಯಶ್ಚಿತ ಮಾಡಿಕೊಳ್ಳಲು ಹೇಳುತ್ತಾರೆ. ಇತಿಹಾಸ ಸಂಶೋಧಕ ಪ್ರೊ ರಾಮ್ ಪುಣಿಯಾನಿ ಮತ್ತು ದಿಲ್ಲಿಯ ಇತಿಹಾಸ ಸಂಶೋಧಕಿ ರುಚಿಕಾ ಶರ್ಮಾ ಇವರು ಈ ಕುರಿತು ಹಲವು ಲೇಖನ ಬರೆದಿದ್ದಾರೆ ಮತ್ತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ).

ಶಿವಾಜಿ ಎಂದೂ ಕೋಮುವಾದಿ ಅಥವಾ ಜಾತಿವಾದಿ ಆಗಿರಲಿಲ್ಲ.  ಮೊಘಲರು ಮತ್ತು ಬಹಮನಿ ಸುಲ್ತಾನರ ಜತೆ ಅವನ ಹೋರಾಟ ನಡೆದಿದ್ದು ಕೇವಲ ರಾಜ್ಯ ವಿಸ್ತರಣೆಗಾಗಿ ಮಾತ್ರ. ಶಿವಾಜಿಯ ಭೂಸೈನ್ಯದಲ್ಲಿ 30% ಸೈನಿಕರು ತುರ್ಕಿ, ಅರಬಿ ಮತ್ತು ಪಠಾಣ್ ಮುಸ್ಲಿಮರಾಗಿದ್ದರು ಹಾಗೂ ಅವನ ಜಲ ಸೈನ್ಯದಲ್ಲಿ 60% ಸೈನಿಕರು ಆಫ್ರಿಕಾ ಮೂಲದ ಸಿದ್ದಿ ಮುಸ್ಲಿಮರಾಗಿದ್ದರು. (ಆಗಿನ ಕಾಲದಲ್ಲಿ ಅರಬಿ, ತುರ್ಕಿ ಮತ್ತು ಆಫ್ರಿಕನ್ನರು ಭಾರತಕ್ಕೆ ಬಂದು ಯಾವುದೇ ಸೈನ್ಯ ಸೇರಲು ಅಥವಾ ವ್ಯಾಪಾರ ಮಾಡಲು ವೀಸಾ ಪಾಸ್‌ರ್ಪೋರ್ಟ್ ಬೇಕಿರಲಿಲ್ಲ ತಾನೇ! ನಮ್ಮ ಪಶ್ಚಿಮ ಕರಾವಳಿಯಲ್ಲಿ  ಅರಬಿಗಳು ಮತ್ತು ಯಹೂದಿಗಳು ವ್ಯಾಪಾರಕ್ಕೆಂದು ಬಂದವರು ಇಲ್ಲಿಯೇ ನಮ್ಮ ಕರಾವಳಿಯಲ್ಲಿ ನೆಲೆ ನಿಂತು ಇಲ್ಲಿಯದೇ ಜೈನ-ಹಿಂದೂ ಧರ್ಮ ಸ್ವೀಕರಿಸಿ, ಇಲ್ಲಿಯದೆ ಭಾಷೆ-ಸಂಸ್ಕೃತಿ ಅನುಸರಿಸಿ ಸ್ಥಳಿಯರೇ ಆಗಿ ಹೋದ ವಿಷಯವನ್ನು ಇತಿಹಾಸಕಾರರು ಒಪ್ಪುತ್ತಾರೆ. ಕರಾವಳಿಯ ತುಳುವ ಜನರ ಎತ್ತರ ನಿಲುವು ಹಾಗೂ ಚರ್ಮದ ಬಣ್ಣ ಇದಕ್ಕೆ ಸಾಕ್ಷಿ ಅನ್ನುತ್ತಾರೆ ಡಿ‌ಎನ್‌ಎ ತಜ್ಞರು).

ಶಿವಾಜಿ ಕೋಮುವಾದಿ ಆಗಿರಲಿಲ್ಲ ಎಂಬುದಕ್ಕೆ ಅವನ ಸೈನ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದ ಪಠಾಣ, ಅರಬಿ, ತುರ್ಕಿ ಸೈನಿಕರೇ ಸಾಕ್ಷಿ.  ಆದರೆ ಈಗಿನ ತುಳು ನಾಟಕದಲ್ಲಿ ಕೋಮು ಸೌಹಾರ್ದತೆಯ ಒಂದೇ ಒಂದು ದೃಶ್ಯ ಇರಲಿಲ್ಲ. ಶಿವಾಜಿಯನ್ನು ಔರಂಗಜೇಬನು ಮೋಸದಿಂದ ಬಂಧಿಸಿ ಆಗ್ರಾದ ತನ್ನ ಬಂಧಿಖಾನೆಯಲ್ಲಿ ಇಡುತ್ತಾನೆ. ಶಿವಾಜಿ ಅಲ್ಲಿಂದ ತಪ್ಪಿಸಿಕೊಳ್ಳಲು ಮದಾರಿ ಮೆಹ್ತರ್ ಎಂಬ ಅಲ್ಲಿಯ ಒಬ್ಬ ಮುಸ್ಲಿಂ ಕಾವಲುಗಾರ ಮಿಠಾಯಿ ಬುಟ್ಟಿ ಒದಗಿಸಿ ಸಹಾಯ ಮಾಡುತ್ತಾನೆ. ಈ ವಿಷಯ ಕೂಡಾ ಸರಿಯಾಗಿ ಈ ನಾಟಕದಲ್ಲಿ ಉಲ್ಲೇಖವಿಲ್ಲ. ಕೇವಲ ಒಬ್ಬ ಕಾವಲುಗಾರ ಸಹಾಯ ಮಾಡಿದ ಎಂದು ಮಾತ್ರ ಹೇಳಲಾಗಿದೆ. ಮುಸ್ಲಿಂ ಕಾವಲುಗಾರ ಎಂಬ ಶಬ್ದ ಯಾಕೆ ಮಾಯವಾಯಿತು?  ಶಿವಾಜಿಯ ಜೀವ ಉಳಿಸಿದ ಆ ಕಾವಲುಗಾರನನ್ನು ನಂತರ ಔರಂಗಜೇಬ ಚಿತ್ರಹಿಂಸೆ ಕೊಟ್ಟು ಕೊಂದಿದ್ದರ ಉಲ್ಲೇಖ ಈ ನಾಟಕದಲ್ಲಿ ಯಾಕಿಲ್ಲ?  ಒಟ್ಟಾರೆ ಮುಸ್ಲಿಮರ ಪರವಾಗಿರುವ ಒಂದೇ ಒಂದು ಶಬ್ದ ಈ ನಾಟಕದಲ್ಲಿ ಇರದಂತೆ ಲೇಖಕರು ಮುಂಜಾಗ್ರತೆ ವಹಿಸಿದ್ದು ಎದ್ದು ಕಾಣುತ್ತದೆ.

ಕೊನೆಗೆ ಶಿವಾಜಿಯ ಪಟ್ಟಾಭಿಷೇಕಕ್ಕೆ ಅವನದೇ ಆಸ್ಥಾನದ  ಬ್ರಾಹ್ಮಣ ಮಂತ್ರಿಗಳೆಲ್ಲಾ ವಿರೋಧ ವ್ಯಕ್ತ ಪಡಿಸಿರುವ ವಿಷಯವನ್ನು ಮರೆಮಾಚಿ ಕೇವಲ ಕಾಶಿಯಿಂದ ಗಾಗಾ ಭಟ್ಟನನ್ನು ಕರೆಸಿರುವ ದೃಶ್ಯ ಮಾತ್ರ ನಾಟಕದಲ್ಲಿದೆ.  ಅಷ್ಟೇ ಅಲ್ಲ ಗಾಗಾ ಭಟ್ಟ ತನ್ನ ಎಡಗಾಲು ಹೆಬ್ಬೆಟ್ಟಿನಿಂದ ಶಿವಾಜಿಯ ಹಣೆಗೆ ರಾಜತಿಲಕ ಇಡುವ ದೃಶ್ಯವೇ ಇಲ್ಲ. ಅವನು ಕೇವಲ ಶಿವಾಜಿಯ ತಲೆಗೆ ಕಿರೀಟ ಇಡುವ ದೃಶ್ಯ ಮಾತ್ರ ಇದೆ. ಒಟ್ಟಾರೆ ನನ್ನ ಈ 74 ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಇದ್ದರೂ ಕುತೂಹಲದಿಂದ ನಾನು ಈ ಛತ್ರಪತಿ ಶಿವಾಜಿ ನಾಟಕ ನೋಡಿದೆ. ಆದರೆ ಮನಸ್ಸಿಗೆ ತೃಪ್ತಿ ಆಗಲಿಲ್ಲ. 

ನಮ್ಮ ದೇಶದ ಅನೇಕ ರಾಜ್ಯಗಳಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಮೊಘಲರ ಸಂಪೂರ್ಣ ಇತಿಹಾಸವನ್ನೇ ತೆಗೆದು ಹಾಕಿರುವಾಗ ಕೇವಲ ನಮ್ಮ ಕರಾವಳಿಗೆ ಮೀಸಲಾಗಿರುವ ತುಳು ಭಾಷೆಯ ನಾಟಕದಲ್ಲಿ ಶಿವಾಜಿಯ ಇತಿಹಾಸ ತಿರುಚಿರುವುದು ಆಶ್ಚರ್ಯವಲ್ಲ ಬಿಡಿ. ಮುಂಬಯಿಯ ಇತಿಹಾಸ ತಜ್ಞ ಪ್ರೊ.ರಾಮ್ ಪುಣಿಯಾಣಿ ಮತ್ತು ದಿಲ್ಲಿಯ ಇತಿಹಾಸ ತಜ್ಞೆ ರುಚಿಕಾ ಶರ್ಮ ಇವರನ್ನು ಮಂಗಳೂರಿಗೆ ಕರೆಸಿ ಶಿವಾಜಿಯ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿ ತುಳುವರಿಗೆ ಹೇಳುವ ಅಗತ್ಯವಿದೆ.

ಈ ತುಳು ನಾಟಕದಲ್ಲಿ ಶಿವಾಜಿಯ ಬಾಯಿಂದ “ಸನಾತನ” ಧರ್ಮ ಮತ್ತು ‘ಹಿಂದುತ್ವ’  ಎಂಬ ಶಬ್ದಗಳ ಉಲ್ಲೇಖ  ಅಡಿಗಡಿಗೆ ಬರುತ್ತದೆ. ಆದರೆ ಶಿವಾಜಿಯ ಕಾಲದಲ್ಲಿ ಈ ಎರಡೂ ಶಬ್ದಗಳು ಬಳಕೆಯಲ್ಲಿ ಇರಲೇ ಇಲ್ಲ.  ‘ಸನಾತನ’ ಶಬ್ದ ಮೂಲತಃ ಪಾಲಿ- ಪಾಕಿತ (ಪ್ರಾಕೃತ) ಭಾಷೆಯ ಶಬ್ದ,  ಮತ್ತು ಇದನ್ನು ಮೊತ್ತಮೊದಲು ಬಳಸಿದ್ದು 2,500 ವರ್ಷಗಳ ಹಿಂದೆ  ಬೌದ್ಧರ ತ್ರಿಪಿಟಕ ಎಂಬ ಗ್ರಂಥದಲ್ಲಿ. ಆದರೆ ಆಧುನಿಕ ಭಾರತದಲ್ಲಿ ಇದನ್ನು ಕೇವಲ ಹಿಂದಿನ 75-80 ವರ್ಷಗಳಿಂದ ಮಾತ್ರ ಹಿಂದೂ ಧರ್ಮಕ್ಕೆ ಅನ್ವಯಿಸಿ ಬಳಸಲಾಗುತ್ತಿದೆ. ಜತೆಗೆ ಹಿಂದುತ್ವ ಎಂಬ ಶಬ್ದ ಕೂಡಾ ಗೋಲ್ವಲ್ಕರ್ 1940 ರ ದಶಕದಲ್ಲಿ ಹುಟ್ಟು ಹಾಕಿದ ಹೊಸ ಶಬ್ದ ಅಷ್ಟೇ.

ಒಟ್ಟಾರೆ ವಿಜಯಕುಮಾರ್ ಕೊಡಿಯಾಲಬೈಲ್ ಇವರ ಶಿವಾಜಿ ನಾಟಕ ನಿರಾಶೆ ತರಿಸಿತು.

ಪ್ರವೀಣ್  ಎಸ್  ಶೆಟ್ಟಿ, ಮಂಗಳೂರು

ಹಿರಿಯ ಲೇಖಕರು

ಮೊ : 9900555161  

More articles

Latest article

Most read