ಮಲೆನಾಡಿನಲ್ಲಿ “ದಿ ಗುಡ್‌ ಪೀಪಲ್‌ ಆಫ್‌ ಮಲೆಯಾದ್ರಿ ನಾಟಕ”

Most read

ಕಳೆದ ಹದಿನೈದು ದಿನಗಳಿಂದ ಹಾಸನದ ಸಕಲೇಶಪುರ ತಾಲ್ಲೂಕಿನ ರಕ್ಷಿದಿ ಗ್ರಾಮದಲ್ಲಿ ಪ್ರಾಕೃತಿಕ ರಂಗ ಶಿಬಿರ ನಡೆಯುತ್ತಿದೆ. ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮಲೆನಾಡಿನ ಕಥೆಯನ್ನು ಆಧರಿಸಿ ಮಲೆಯಾದ್ರಿ ನಾಟಕ ಕಟ್ಟುತ್ತಿದ್ದಾರೆ. ಜೊತೆಗೆ ಶಿಬಿರಾರ್ಥಿಗಳ ಬದುಕಿನ ಕಥೆಗಳನ್ನು ನಾಟಕದಲ್ಲಿ ನೋಡಬಹುದಾಗಿದೆ. ಕಳೆದ ಹದಿನೈದು ದಿನಗಳಿಂದಲು ಈ ಶಿಬಿರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಹಾಡು, ಕುಣಿತ, ಚಾರಣ, ಪರಿಸರ,  ಫೋಟೋಗ್ರಾಫಿ, ರಂಗಭೂಮಿ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಕೃತಿಯ ಮಧ್ಯೆ ಸುಂದರವಾದ ಶಿಬಿರ ಮೂಡಿ ಬರುತ್ತಲಿದೆ.

ಶಿಬಿರವನ್ನು ಜೈ ಕರ್ನಾಟಕ ಸಂಘ ಬೆಳ್ಳೆಕೆರೆ  ತಂಡ ಆಯೋಜಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ನಡೆಯುತ್ತಿದೆ. ಪ್ರಸಾದ್‌ ರಕ್ಷಿದಿಯವರು ಶಿಬಿರದ ಸಂಚಾಲಕರಾಗಿದ್ದು, ನವೀನ್‌ ಸಾಣೇಹಳ್ಳಿ ನಾಟಕದ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೆ ನಾಟಕ ಕೊನೆಯ ಹಂತದಲ್ಲಿದ್ದು ನಾಳೆ 15 ರ ಬುಧವಾರ ಸಂಜೆ ಏಳು ಘಂಟೆಗೆ ಶಿಬಿರಾರ್ಥಿಗಳಿಂದ ನಾಟಕ ಪ್ರದರ್ಶನ ಮತ್ತು ಶಿಬಿರದ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ.

ಸಮಾರೋಪದಲ್ಲಿ ಖ್ಯಾತ ನ್ಯಾಯವಾದಿಗಳಾದ ಸುಧೀರ್‌ ಕುಮಾರ್‌ ಮುರೋಳಿಯವರು ಭಾಗವಹಿಸುತ್ತಿದ್ದಾರೆ. ನಾಟಕ ಸಕಲೇಶಪುರದ ರಕ್ಷಿದಿ ಗ್ರಾಮದ ಪೂರ್ಣಚಂದ್ರ ತೇಜಸ್ವಿ ರಂಗ ಮಂದಿದಲ್ಲಿ ನಡೆಯುತ್ತಿದ್ದು ಉಚಿತ ಪ್ರವೇಶವಿದ್ದು ತಾವೆಲ್ಲರು ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ  – 9448825701

More articles

Latest article