ಬ್ರದರ್ ಸ್ವಾಮಿಗಳು ಹಗ್ಗವನ್ನು ಹಾವು ಅಂತಿದ್ದಾರೆ: ಗೇಲಿ ಮಾಡಿದ‌‌ ಕಾಂಗ್ರೆಸ್

ಬೆಂಗಳೂರು: ಬ್ರದರ್ ಸ್ವಾಮಿಗಳು ಹಗ್ಗವನ್ನು ತೋರಿಸಿ ಹಾವು ಎಂದು ನಂಬಿಸಲು ಸಾಹಸ ಮಾಡುತ್ತಿದ್ದಾರೆ‌ ಎಂದು ಕಾಂಗ್ರೆಸ್ ಪಕ್ಷ ಮಾಜಿ‌ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಲೇವಡಿ ಮಾಡಿದೆ.

ಲೈಂಗಿಕ ಹಗರಣ ನಡೆಸಿ ಪರಾರಿಯಾಗಿರುವ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ‌ ಕಾರು ಚಾಲಕನನ್ನು ಕಾಂಗ್ರೆಸ್ ನಾಯಕರು ಮಲೇಶಿಯಾಗೆ ಕಳುಹಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಇದೇ ವಿಷಯ ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಅಧಿಕೃತ‌ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಕುಮಾರಸ್ವಾಮಿಯನ್ನು ಗೇಲಿ ಮಾಡಲಾಗಿದೆ.

ಡ್ರೈವರ್ ಕಾರ್ತಿಕ್ ಗೌಡ ಮಲೇಷ್ಯಾಕ್ಕೆ ಹೋಗಿದ್ದಾನೆ, ಯಾರೋ ಕಳಿಸಿದ್ದಾರೆ ಎಂದು ಬಾಯಿ ಬಡಿದುಕೊಂಡಿದ್ದರು. ಆದರೆ ಕಾರ್ತಿಕ್ ಗೌಡ ಬಳಿ ಪಾರ್ಸ್ಪೋರ್ಟ್ ಇಲ್ಲವಂತೆ ಹಾಗೂ ಕಾರ್ತಿಕ್ ಗೌಡ ರಾಜ್ಯದಲ್ಲೇ ಇದ್ದು ಚಾನಲ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬ್ರದರ್ ಸ್ವಾಮಿಯ ಸುಳ್ಳಿನ ಫ್ಯಾಕ್ಟರಿ ಜೊತೆಗೆ ಬಿಜೆಪಿಯ ಫೇಕ್ ಫ್ಯಾಕರಿಯೂ ಸೇರಿ ಸುಳ್ಳಿನ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾರೆ‌ ಎಂದು ಕಾಂಗ್ರೆಸ್ ಟೀಕಿಸಿದೆ.

More articles

Latest article

Most read